ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ರಂದು ರಾಜ್ಯಮಟ್ಟದ ನೂಪುರ ನೃತ್ಯೋತ್ಸವ

Published 8 ಫೆಬ್ರುವರಿ 2024, 16:01 IST
Last Updated 8 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ಬೀದರ್‌: ಶಾಸ್ತ್ರೀಯ ನೃತ್ಯ ಶಾಲೆ ನೂಪುರ ನೃತ್ಯ ಅಕಾಡೆಮಿಯಿಂದ ರಾಜ್ಯಮಟ್ಟದ ನೂಪುರ ನೃತ್ಯೋತ್ಸವ ಕಾರ್ಯಕ್ರಮವನ್ನು ಫೆ. 11ರಂದು ಸಂಜೆ 4ಕ್ಕೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಉಷಾ ಪ್ರಭಾಕರ ತಿಳಿಸಿದ್ದಾರೆ.

ನೃತ್ಯೋತ್ಸವವನ್ನು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣಾ ಉದ್ಘಾಟಿಸುವರು. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸುವರು ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೃತ್ಯೋತ್ಸವದಲ್ಲಿ ವಿದ್ಯಾರ್ಥಿಗಳು ರಾಮಾಯಣದ ನೃತ್ಯ ರೂಪಕ ಪ್ರಸ್ತುತಪಡಿಸುವರು. ಬಾಲರಾಮನ ಲೀಲೆಗಳು ಮತ್ತು ರಾಮನ ಪಟ್ಟಾಭಿಷೇಕ ಮೂಡಿಬರಲಿದೆ. ಭರತನಾಟ್ಯ ವಿಭಾಗದಲ್ಲಿ ಗುರುವಂದನೆ, ಅಲರಿಪು, ಕೌತ್ತಂ, ಶ್ಲೋಕಗಳು, ರೂಪಕಗಳು ಪ್ರದರ್ಶನಗೊಳ್ಳಲಿವೆ. ಜಾನಪದ ನೃತ್ಯ ವಿಭಾಗದಲ್ಲಿ ವೈವಿಧ್ಯಮಯ ತಂಬೂರಿಗೀತೆ ನೃತ್ಯ, ಪೂಜಾ ನೃತ್ಯ, ಮಾತೆಯರ ಕೋಲಾಟಗಳಿವೆ. ದೇಶಭಕ್ತಿಗೀತೆಗಳಿಗೆ ಪಾರಂಪರಿಕ ನೃತ್ಯಗಳು, ದಾಸರ ಪದಗಳಿಗೆ ಭಕ್ತಿಯ ನೃತ್ಯ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಕೃಷ್ಣಲೀಲಾ ಕಥಾ, ಬಸವಣ್ಣನ ವಚನಗಳಿಗೆ ವಚನ ನೃತ್ಯ, ಮಾತೆಯರಿಂದ ನಟರಾಜ ನೃತ್ಯ ನಮನ, ವಿಶೇಷ ಆಕರ್ಷಣೆಯಾಗಿ ಪಾಶ್ಚಾತ್ಯ ಸಂಗೀತಕ್ಕೂ ಶಾಸ್ತ್ರೀಯ ನೃತ್ಯಗಳನ್ನು ಬೆಸೆಯುವ ಫ್ಯೂಷನ್‌ ಡಾನ್ಸ್‌ ಇರಲಿವೆ ಎಂದು ತಿಳಿಸಿದ್ದಾರೆ. ಉಚಿತ ಪ್ರವೇಶವಿದ್ದು, ಕಾರ್ಯಕ್ರಮದಲ್ಲಿ ಜನ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT