ಬೀದರ್: ಎರಡು ವಾರಗಳಿಂದ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯದ್ದೇ ಚರ್ಚೆ ನಡೆಯುತ್ತಿದೆ. ಬೆಂಗಳೂರಲ್ಲಿ ಈರುಳ್ಳಿ ಬೆಲೆ ₹ 200 ಗೆ ಏರುತ್ತಿದ್ದಂತೆಯೇ ಇಲ್ಲಿಯ ವ್ಯಾಪಾರಸ್ಥರು ಸಹ ಬೆಲೆ ಪ್ರತಿ ಕೆ.ಜಿಗೆ ₹ 120ಕ್ಕೆ ಹೆಚ್ಚಳ ಮಾಡಿದ್ದಾರೆ. ಗುರುವಾರ ₹90 ಗೆ ಮಾರಾಟವಾಗಿದ್ದ ಈರುಳ್ಳಿ ಶುಕ್ರವಾರ ಬೆಳಗಾಗುವುದರಲ್ಲಿ ಮತ್ತೆ ₹30 ಏರಿಕೆ ಕಂಡಿದೆ.

ಗ್ರಾಹಕರು ಈರುಳ್ಳಿಗೆ ಪರ್ಯಾಯವಾಗಿ ಬೆಳ್ಳುಳ್ಳಿಯನ್ನೂ ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಕಾರಣ ಬೆಳ್ಳುಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ₹ 180 ತಲುಪಿದೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ಪ್ಯಾಜ್ ಪಕೋಡಾ ಹಾಗೂ ಈರುಳ್ಳಿ ಭಜಿ ಮಾಡುವುದನ್ನೇ ನಿಲ್ಲಿಸಲಾಗಿದೆ. ಮಾಂಸಾಹಾರಿ ಹೋಟೆಲ್ಗಳಲ್ಲಿ ಮಾಲೀಕರು ಗ್ರಾಹಕರಿಗೆ ಈರುಳ್ಳಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಹೋಟೆಲ್ಗಳು ಈರುಳ್ಳಿಗೆ ಪರ್ಯಾಯವಾಗಿ ಎಲೆಕೋಸು ಕೊಟ್ಟು ಗ್ರಾಹಕರನ್ನು ಸಮಾಧಾನ ಪಡಿಸುತ್ತಿವೆ.

ಮಹಾರಾಷ್ಟ್ರದ ಸೋಲಾಪುರದ ಜಿಲ್ಲೆಯಲ್ಲಿ ರೈತರು ಬೆಳೆಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಎರಡು ವಾರಗಳ ಹಿಂದೆಯೇ ಜಿಲ್ಲೆಯ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ ₹ 500 ರಿಂದ ₹ 600ಗೆ ಖರೀದಿಸಿದ್ದಾರೆ. ಬೆಲೆ ಏರಿಕೆಯಾದ ನಂತರ ಅದರ ಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಬೆಲೆ ಏರಿಕೆಯ ಲಾಭ ದೊರಕಿಲ್ಲ. ಆದರೆ, ಸಗಟು ವ್ಯಾಪಾರಸ್ಥರು ಖುಷಿಯಲ್ಲಿದ್ದಾರೆ.

ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹ 800 ಮುಂದುವರಿದಿದೆ. ಮದುವೆ, ಮುಂಜಿವೆಗಳು ಇರುವವರು ಮಾತ್ರ ನುಗ್ಗೆಕಾಯಿ ಕೊಂಡುಕೊಳ್ಳುತ್ತಿದ್ದಾರೆ. ಗೃಹಿಣಿಯರು ನುಗ್ಗೆಕಾಯಿ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಗಿದೆ. ಆಲೂಗಡ್ಡೆ, ಬೀನ್ಸ್, ತೊಂಡೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್ಗೆ ಹೂಕೋಸು, ಮೆಂತೆಸೊಪ್ಪು ಬೆಲೆ ₹ 300, ಹಿರೇಕಾಯಿ, ಗಜ್ಜರಿ, ಕೊತಂಬರಿ ₹ 200, ಎಲೆಕೋಸು, ಪಾಲಕ್ ₹150, ಬದನೆಕಾಯಿ, ಸಬ್ಬಸಗಿ, ಬೀಟ್ರೂಟ್ ಹಾಗೂ ಟೊಮೆಟೊ ಬೆಲೆ ₹100 ಕಡಿಮೆಯಾಗಿದೆ.

‘ಹೈದರಾಬಾದ್ನಿಂದ ಮೆಣಸಿನಕಾಯಿ, ಬೀನ್ಸ್, ಬೀಟ್ರೂಟ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಉತ್ತರ ಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಬಂದಿದೆ’ ಎಂದು ಗಾಂಧಿಗಂಜ್ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.

ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
ಈರುಳ್ಳಿ 80-90, 100-120
ಬೆಳ್ಳುಳ್ಳಿ 180-200, 160-180
ನುಗ್ಗೆಕಾಯಿ 700-800, 700-800
ಮೆಣಸಿನಕಾಯಿ 15-20, 20-25
ಆಲೂಗಡ್ಡೆ 20-25, 20-25
ಬದನೆಕಾಯಿ 50-60, 40-50
ಎಲೆಕೋಸು 30-40, 20-25
ಗಜ್ಜರಿ 60-80, 50-60
ಬೀನ್ಸ್ 35-40, 35-40
ಮೆಂತೆ ಸೊಪ್ಪು 50-60, 25-30
ಹೂಕೋಸು 70-80, 40-50
ಸಬ್ಬಸಗಿ 40-50, 30-40
ಬೀಟ್ರೂಟ್ 50-60, 40-50
ತೊಂಡೆಕಾಯಿ 30-40, 30-40
ಕರಿಬೇವು 30-40, 30-40
ಕೊತಂಬರಿ 50-60, 30-40
ಟೊಮೆಟೊ 25-30, 15-20
ಪಾಲಕ್ 30-40, 20-25
ಬೆಂಡೆಕಾಯಿ 35-40, 35-40
ಹಿರೇಕಾಯಿ 70-80, 50-60

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.