ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದನೆಕಾಯಿ ಆಸ್ಥಾನದಲ್ಲಿ ಅವರೆಕಾಯಿ ದರ್ಬಾರು

Last Updated 1 ಜನವರಿ 2022, 13:32 IST
ಅಕ್ಷರ ಗಾತ್ರ

ಬೀದರ್: ಹೊಸ ವರ್ಷದ ಆರಂಭದಲ್ಲೇ ಇಲ್ಲಿಯ ಮಾರುಕಟ್ಟೆ ತುರಾಯಿ, ಕೊಂಬಿನ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ತರಕಾರಿ ರಾಜ ಬದನೆಕಾಯಿ ಹಾಗೂ ಬೆಂಡೆಕಾಯಿ ಬೆಲೆ ಪ್ರತಿ ಕೆಜಿಗೆ ₹ 140ಗೆ ಏರಿಕೆಯಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಶತಕ ಬಾರಿಸಿ ಹಿರಿಹಿರಿ ಹಿಗ್ಗಿ ನಿಂತಿದೆ. ಡೊಣ ಮೆಣಸಿನಕಾಯಿ ಬೆಲೆ ಹೆಚ್ಚಿಸಿಕೊಂಡು ಬೀಗುತ್ತಿದೆ.

ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದೆ. ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಇದೇ ಕಾರಣ ಬೆಲೆ ಗಗನಕ್ಕೆ ಏರಿದೆ. ಪ್ರತಿ ಕೆ.ಜಿ.ಗೆ ₹ 400 ರಿಂದ ₹ 500ಕ್ಕೆ ಮಾರಾಟವಾಗುತ್ತಿದೆ.

ಪ್ರತಿ ಕ್ವಿಂಟಲ್‌ ಬೆಂಡೆಕಾಯಿ ಬೆಲೆ ₹ 5 ಸಾವಿರ, ಮೆಣಸಿನಕಾಯಿ, ಬದನೆಕಾಯಿ ₹ 2 ಸಾವಿರ, ಬೆಳ್ಳುಳ್ಳಿ, ಡೊಣ ಮೆಣಸಿನಕಾಯಿ, ಕರಿಬೇವು ಹಾಗೂ ನುಗ್ಗೆಕಾಯಿ ಬೆಲೆ ₹ 1 ಸಾವಿರ ಹೆಚ್ಚಾಗಿದೆ.

ಗಜ್ಜರಿ, ಹೂಕೋಸು, ಪಾಲಕ್‌ ಬೆಲೆ ₹ 2 ಸಾವಿರ, ಮೆಂತೆ ಸೊಪ್ಪು₹ 4 ಸಾವಿರ, ತೊಂಡೆಕಾಯಿ, ಕೊತಂಬರಿ ಬೆಲೆ ₹ 1 ಸಾವಿರ ಇಳಿಕೆಯಾಗಿದೆ. ಈರುಳ್ಳಿ, ಆಲೂಗಡ್ಡೆ, ಬೀಟ್‌ರೂಟ್‌, ಟೊಮೆಟೊ, ಎಲೆಕೋಸು, ಬೀನ್ಸ್‌, ಸಬ್ಬಸಗಿ, ಹಿರೇಕಾಯಿ, ಚವಳೆಕಾಯಿ ಬೆಲೆ ಸ್ಥಿರವಾಗಿದೆ.

ಹಬ್ಬಕ್ಕೆ ಹೆಚ್ಚಿದ ಹಸಿಕಾಳು ಬೇಡಿಕೆ:
ಎಳ್ಳು ಅಮಾವಾಸ್ಯೆ ಪ್ರಯುಕ್ತ ಕೆಲ ತರಕಾರಿ ಬೆಲೆ ಗಗನಕ್ಕೆ ಏರಿದೆ. ಎಳ್ಳು ಅಮಾವಾಸ್ಯೆಗೆ ರೈತ ಕುಟುಂಬಗಳು ವರೆಕಾಯಿ, ತೊಗರಿಕಾಯಿಯಿಂದ ವಿಶಿಷ್ಟ ಖಾದ್ಯ ಭಜ್ಜಿ ತಯಾರಿಸಿ ಹೊಲಗಳಿಗೆ ಹೋಗಿ ಸಾಮೂಹಿಕ ಭೋಜನ ಮಾಡುವ ಸಂಪ್ರದಾಯ ಇದೆ.

ತರಕಾರಿ ಮಾರುಕಟ್ಟೆ ಅಲ್ಲದೇ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ ಹಾಗೂ ಮೋಹನ್‌ ಮಾರ್ಕೆಟ್‌ನಲ್ಲಿ ಹಸಿ ಬೇಳೆಕಾಳುಗಳು ಮಾರಾಟವಾಗುತ್ತಿವೆ. ಅವರೆಕಾಯಿ ಬೆಲೆ ₹ 120 ರಿಂದ ₹140, ತೊಗರಿಕಾಯಿ ₹ 100 ರಿಂದ ₹120 ಹಾಗೂ ಈರುಳ್ಳಿ ಸೊಪ್ಪಿನ ಬೆಲೆ ₹ 40 ರಿಂದ ₹60ಗೆ ಏರಿಕೆಯಾಗಿದೆ.

ಶುಕ್ರವಾರ ಮಧ್ಯರಾತ್ರಿ ಹೊಸ ವರ್ಷವನ್ನು ಸಂಭ್ರಮದೊಂದಿಗೆ ಆಚರಿಸಿರುವ ಜಿಲ್ಲೆಯ ಜನ ಇದೀಗ ಭಾನುವಾರ ಎಳ್ಳು ಅಮಾವಾಸ್ಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಗೆಳೆಯರೊಂದಿಗೆ ಸಂಭ್ರಮಿಸಿದವರು ಭಾನುವಾರ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಅಣಿಯಾಗಿದ್ದಾರೆ. ವೈವಿಧ್ಯಮಯ ಖಾದ್ಯವೇ ಎಳ್ಳು ಅಮಾವಾಸ್ಯೆಯ ವಿಶೇಷ. ಹೀಗಾಗಿ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ ಎಂದು ತರಕಾರಿ ವ್ಯಾಪಾರಿ ಶಿವಾನಂದ ಮಾಡಗೂಳ ಹೇಳುತ್ತಾರೆ.

ಅವರೆಕಾಯಿ, ಬೀನ್ಸ್, ಚವಳೆಕಾಯಿ ತೆಲಂಗಾಣದ ಜಿಲ್ಲೆಗಳಿಂದ ಆವಕವಾಗಿದೆ. ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಸೋಲಾಪುರದಿಂದ ಬಂದರೆ ಹಸಿ ಮೆಣಸಿನಕಾಯಿ, ಆಲೂಗಡ್ಡೆ ಹಾಗೂ ಗೆಣಸಿನಕಾಯಿ ಬೆಳಗಾವಿಯಿಂದ ಬಂದಿದೆ.

ಜಿಲ್ಲೆಯ ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಕೊತಂಬರಿ, ಪಾಲಕ್‌, ಹಿರೇಕಾಯಿ, ಬದನೆಕಾಯಿ, ಎಲೆಕೋಸು ಹಾಗೂ ಹೂಕೋಸು ತರಕಾರಿ ಮಾರುಕಟ್ಟೆಗೆ ಬಂದಿದೆ.

............................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 30-40, 30-40
ಮೆಣಸಿನಕಾಯಿ 50-60,60-80
ಆಲೂಗಡ್ಡೆ 20-30,20-30
ಎಲೆಕೋಸು 60-80,70-80
ಬೆಳ್ಳುಳ್ಳಿ 40-50,50-60
ಗಜ್ಜರಿ 60-80,40-60
ಬೀನ್ಸ್‌ 60-80,70-80
ಬದನೆಕಾಯಿ 100-120,120-140
ಮೆಂತೆ ಸೊಪ್ಪು 80-100,40-60
ಹೂಕೋಸು 80-100,60-80
ಸಬ್ಬಸಗಿ 50-60,50-60
ಬೀಟ್‌ರೂಟ್‌ 40-50,40-50
ತೊಂಡೆಕಾಯಿ 60-70,50-60
ಕರಿಬೇವು 40-50,50-60
ಕೊತಂಬರಿ 30-40,20-30
ಟೊಮೆಟೊ 30-40,30-40
ಪಾಲಕ್‌ 40-60,330-40
ಬೆಂಡೆಕಾಯಿ 80-90,120-140
ಹಿರೇಕಾಯಿ 80-100,80-100
ನುಗ್ಗೆಕಾಯಿ 200-220,400-500
ಡೊಣ ಮೆಣಸಿನಕಾಯಿ 70-80,80-90
ಚವಳೆಕಾಯಿ 60-80,70-80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT