ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗೂರ ಬಸ್ ಸೌಲಭ್ಯ ಸ್ಥಗಿತ: ಆಕ್ರೋಶ

Published 20 ಮೇ 2024, 16:10 IST
Last Updated 20 ಮೇ 2024, 16:10 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ನಾಗೂರ (ಬಿ) ಗ್ರಾಮದ ಬಸ್ ಸೌಲಭ್ಯ ಸ್ಥಗಿತವಾಗಿ ಪ್ರಯಾಣಿಕರು ಪರದಾಡಬೇಕಿದೆ.


ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಮೇರೆಗೆ ಕಳೆದ ಫೆಬ್ರುವರಿ ತಿಂಗಳಲ್ಲಿ ಈ ಊರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಇಲ್ಲಿಯ ಘಟಕದಿಂದ ನಿತ್ಯ ನಾಲ್ಕು ಬಾರಿ ನಾಗೂರ ಗ್ರಾಮಕ್ಕೆ ಬಸ್ ಹೋಗಿ ಬರುತ್ತಿತ್ತು‌. ಆದರೆ, ಕಳೆದ ಒಂದು ತಿಂಗಳಿನಿಂದ ಬಸ್ ಸೌಲಭ್ಯ ಸ್ಥಗಿತ ಮಾಡಲಾಗಿದೆ ಎಂದು ಗ್ರಾಮದ ಮುಖಂಡ ಸಂತೋಷ ಮಸ್ಕಲೆ ತಿಳಿಸಿದ್ದಾರೆ.

ಬಸ್ ಸೇವೆ ಸ್ಥಗಿತವಾಗಿರುವುದರಿಂದ ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿದೆ. ಈ ಬೆಂಕಿ ಬಿಸಿಲಿನಲ್ಲಿ 3 ಕಿ. ಮೀ. ನಡೆದುಕೊಂಡು ಬಸ್ ಹಿಡಿದು ಮುಂದೆ ಔರಾದ್, ಬೀದರ್ ಕಡೆ ಹೋಗಬೇಕು. ಈ ಬಗ್ಗೆ ಔರಾದ್ ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ಸಲ ತಿಳಿಸಿದರೂ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಗ್ರಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

’ನಾಗೂರ ಊರಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಸಂಚರಿಸಲು ಸಮಸ್ಯೆಯಾಗುತ್ತಿದೆ. ಹೀಗಾಗಿ ಕೆಲ ದಿನ ಬಸ್ ಓಡಾಟ ನಿಲ್ಲಿಸಿ ಎಂದು ಗ್ರಾಮಸ್ಥರೇ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಈಗ ರಸ್ತೆ ಕಾಮಗಾರಿ‌ ಮುಗಿದಿದೆ. ನಿನ್ನೆಯಿಂದ ನಾಗೂರಗೆ ಬಸ್ ಹೋಗುತ್ತಿದೆ’ ಎಂದು ಘಟಕ ವ್ಯವಸ್ಥಾಪಕ‌ ಎಸ್.ಪಿ.ರಾಠೋಡ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT