ಗುರುವಾರ , ಜನವರಿ 21, 2021
27 °C

ಕುಂದುಕೊರತೆ: ಜ್ಯೋತಿ ಕಾಲೊನಿ ರಸ್ತೆ ದುರಸ್ತಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜ್ಯೋತಿ ಕಾಲೊನಿಯಲ್ಲಿ ಕಳೆದ ವರ್ಷವೇ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ನಗರಸಭೆಯು ಒಳಚರಂಡಿ ಪೈಪ್‌ ಅಳವಡಿಸಲು ರಸ್ತೆಗಳನ್ನು ಅಗೆದಿದೆ. ಸುಸ್ಥಿತಿಯಲ್ಲಿದ್ದ ರಸ್ತೆಗಳು ಹಾಳಾಗಿವೆ. ಜನ ಸುಲಭವಾಗಿ ಸಂಚರಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದಾಗಿ ಪ್ರತಿ ವರ್ಷ ಕೋಟ್ಯಂತರ ಹಣ ಮಣ್ಣು ಪಾಲಾಗುತ್ತಿದೆ. ಒಳಚರಂಡಿ ನಿರ್ಮಿಸುವ ಮಾಹಿತಿ ಇದ್ದರೂ ನಗರಸಭೆ ಅಧಿಕಾರಿಗಳು ಮಾರ್ಚ್‌ ಅಂತ್ಯಕ್ಕೆ ಬಜೆಟ್‌ ಖರ್ಚು ಮಾಡಲು ಜ್ಯೋತಿ ಕಾಲೊನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿದರು. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಮತ್ತೆ ಸಂಪೂರ್ಣ ಅಗೆದು ಹಾಕಿದ್ದಾರೆ.

ರಸ್ತೆಯಲ್ಲಿ ಬೈಕ್‌ಗಳು ಓಡಾಡಲು ಸಾಧ್ಯವಾಗುತ್ತಿಲ್ಲ. ಹದಗೆಟ್ಟ ರಸ್ತೆ ನೋಡಿ ಆಟೊಚಾಲಕರು ಜ್ಯೋತಿ ಕಾಲೊನಿಗೆ ಬರುತ್ತಿಲ್ಲ. ಸಂಬಂಧಪಟ್ಟವರು ತಕ್ಷಣ ರಸ್ತೆ ದುರಸ್ತಿ ಪಡಿಸಿಕೊಡಬೇಕು.

- ಆನಂದ ಪಾಟೀಲ, ಯುವ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು