ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ: ಖಾಸಗಿ ವ್ಯಕ್ತಿಯಿಂದ ಶಾಲೆ ಕೊಠಡಿಗೆ ಬೀಗ, ಬಯಲಲ್ಲಿ ಒಲೆ ಹೂಡಿ ಊಟ ತಯಾರು

ಗಣಪತಿ ಕುರನ್ನಳೆ
Published 15 ಮಾರ್ಚ್ 2024, 5:08 IST
Last Updated 15 ಮಾರ್ಚ್ 2024, 5:08 IST
ಅಕ್ಷರ ಗಾತ್ರ

ಕಮಲನಗರ: ತಾಲ್ಲೂಕಿನ ಮೈಲೂರ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಎರಡು ಕೋಣೆಗಳನ್ನು ಒಂದನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿ ಬೀಗ ಹಾಕಿಕೊಂಡಿದ್ದಾರೆ. ಇದರಿಂದ ಒಂದೇ ಕೊಠಡಿಯಲ್ಲಿ ಮಕ್ಕಳ ಕುಳಿತು ಪಾಠ ಕೇಳುವಂತಾಗಿದೆ.

ಕುಳಿತುಕೊಳ್ಳಲು ಇಲ್ಲದ ಜಾಗ ಇಲ್ಲದಂತಾಗಿದ್ದು ಶಿಕ್ಷಕರು ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ತರಗತಿ ಕೋಣೆಯಲ್ಲಿ ಮುಖ್ಯಶಿಕ್ಷಕರ ಕಾರ್ಯಾಲಯದ ಜತೆಗೆ ಅಡುಗೆ ಸಾಮಗ್ರಿಗಳನ್ನೂ ಇರಿಸಲಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 15 ಕಿ.ಮೀ.ದೂರದ ಗಡಿ ಭಾಗದ ಮುಖ್ಯರಸ್ತೆಯಲ್ಲಿ ಇರುವ ಮೈಲೂರ್ ತಾಂಡಾ (ದಾಸಾನಾಯಕ ತಾಂಡಾ)ದಲ್ಲಿ 2000ಕ್ಕೂ ಅಧಿಕ ಜನಸಂಖ್ಯೆ ಇದೆ. ಕಂದಾಯ ಗ್ರಾಮವಾಗಿರುವ ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1–4ನೇ ತರಗತಿಯಲ್ಲಿ  20 ಮಕ್ಕಳು ಅಭ್ಯಾಸ ಮಾಡುತ್ತಾರೆ.

ಮುಖ್ಯಶಿಕ್ಷಕರ ಇಬ್ಬರ ಕಾಯಂ ಶಿಕ್ಷರು, ಒಬ್ಬ ಅತಿಥಿ ಶಿಕ್ಷಕರಿದ್ದಾರೆ.

‘ಶಾಲೆಗೆ ನೀಡಿದ ನಿವೇಶನ ನಮಗೆ ಸೇರಿದ್ದು’ ಎಂದು ನ್ಯಾಯಾಲಯದಲ್ಲಿ ದಾವೆ ಹೂಡಿ ಕೋಣೆಗೆ ಬೀಗ ಹಾಕಿದ್ದಾರೆ. 

ಬಯಲಲ್ಲೇ ಬಿಸಿಯೂಟ ತಯಾರು: ನ್ಯಾಯಾಲಯದಲ್ಲಿ ಪ್ರಕರಣ ದಾಕಲಿಸಿದ ವ್ಯಕ್ತಿ ಬೀಗ ಹಾಕಿಕೊಂಡು ಹೋದ ಕೊಠಡಿ ಒಳಗೆ ಅಡುಗೆ ತಯಾರಿಗೆ ಬೇಕಾದ ಆಹಾರ ಧಾನ್ಯಗಳು, ಸಿಲೆಂಡರ್, ತಟ್ಟೆ ಮತ್ತು ಇನ್ನಿತರ ಇವೆ.

ಮುಖ್ಯ ಅಡುಗೆ ಸಿಬ್ಬಂದಿ ಬಯಲಲ್ಲೇ ಕಲ್ಲಿನ ಒಲೆ ಸಿದ್ದಪಡಿಸಿ ಕಟ್ಟಿಗೆ ಇಟ್ಟು ಅಡುಗೆ ತಯಾರಿಸುವ ಪರಿಸ್ಥಿತಿ ಎದುರಾಗಿದೆ.

ನೀರು ಶುದ್ಧೀಕರಣ ಯಂತ್ರವನ್ನೂ ಕಾಟಾಚಾರಕ್ಕೆ ಅಳವಡಿಸಲಾಗಿದೆ. ಕುಡಿಯುವ ನೀರಿಗಾಗಿ ಚಾವಣಿ ಮೇಲೆ ಎರಡು ಟ್ಯಾಂಕ್‍ಗಳನ್ನು ಅಳವಡಿಸಲಾಗಿದೆ. ಆದರೆ ನಳದ ಸಂಪರ್ಕ ಕಲ್ಪಿಸದೆ ಇರುವುದರಿಂದ ಮಕ್ಕಳು ಮನೆಯಿಂದ ಬಾಟಲಿಯಲ್ಲಿ ನೀರು ತರುತ್ತಾರೆ.

ಕಾಂಪೌಂಡ್‌ ಇಲ್ಲದಿರುವುದರಿಂದ ಗ್ರಾಮದ ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಲಮೂತ್ರ ವಿಸರ್ಜಿಸುತ್ತಿದ್ದು ವಾತಾವರಣ ಸದಾ ದುರ್ವಾಸನೆಯಿಂದ ಕೂಡಿರುತ್ತದೆ.

ಶಾಲೆಗೆ ಕುಡಿಯುವ ನೀರು ಸಮರ್ಪಕ ತರಗತಿ ಕೋಣೆ ಕಲ್ಪಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು
–ಶಿವಾನಂದ ಸ್ವಾಮಿ, ರೈತ ಮುಖಂಡ
ಶಾಲೆಯಲ್ಲಿ ಸೌಲಭ್ಯ ಇಲ್ಲದರಿವ ಬಗ್ಗೆ ಮತ್ತು ನಿವೇಶನದ ತಕರಾರು ಇರುವ ಕುರಿತು ಮಾಹಿತಿ ಪಡೆದು ತಕ್ಷಣ ಕ್ರಮ ಕೈಗೊಳ್ಳುತ್ತೇನೆ.
–ವಿಜಯಲಕ್ಷ್ಮಿ ಭೀಮಾಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT