ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನಲಿಂಗ ರುದ್ರಮುನಿ ಶಿವಾಚಾರ್ಯರ ಸೇವೆ ಶ್ಲಾಘನೀಯ

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿಕೆ
Last Updated 29 ಸೆಪ್ಟೆಂಬರ್ 2022, 6:54 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಚಿಕ್ಕ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ವಹಿಸಿಕೊಂಡಿರುವ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಧಾರ್ಮಿಕ ಚಟುವಟಿಕೆಯೊಂದಿಗೆ ಸಮಾಜೋದ್ಧಾರ ಕಾರ್ಯವನ್ನೂ ಕೈಗೊಳ್ಳುತ್ತಿದ್ದಾರೆ’ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಶ್ಲಾಘಿಸಿದರು.

ನಗರದ ತ್ರಿಪುರಾಂತ ಗವಿಮಠದಲ್ಲಿ ಬುಧವಾರ ನಡೆದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ ಮಾತನಾಡಿ,‘ಸಮಾಜದಲ್ಲಿ ಸುಖ, ಶಾಂತಿ ನೆಲೆಸುವಲ್ಲಿ ಮಠಾಧೀಶರ ಪಾತ್ರ ಬಹಳಷ್ಟಿದೆ. ಅಭಿನವಶ್ರೀಗಳು ದುಶ್ಚಟ ಬಿಡಿಸುವ ಅಭಿಯಾನವೂ ಹಮ್ಮಿಕೊಂಡಿದ್ದರು’ ಎಂದು ಅವರು ಹೇಳಿದರು.

ಚಿಂಚನಸೂರು ಸಿದ್ಧಮಲ್ಲ ಶಿವಾಚಾರ್ಯರು, ಮುಖಂಡರಾದ ಮಾಲಾ ನಾರಾಯಣರಾವ್, ಬಾಬು ಹೊನ್ನಾನಾಯಕ, ಲತಾ ಹಾರಕೂಡೆ, ಪ್ರದೀಪ ವಾತಡೆ, ಅರ್ಜುನ ಕನಕ, ಮನೋಹರ ಮೈಸೆ, ದೀಪಕ ಮಾಲಗಾರ, ಶಹಾಜಹಾನಾ ತತ್ವೀರ್, ಸುಧೀರ್ ಕಾಡಾದಿ ಹಾಗೂ ಭಕ್ತ ಕುಂಬಾರ ಮಾತನಾಡಿದರು.

ಪ್ರಮುಖರಾದ ಆನಂದ ದೇವಪ್ಪ, ರಾಜಕುಮಾರ ಶಿರಗಾಪುರ, ಶರಣಪ್ಪ ಬಿರಾದಾರ, ಬಸವಂತಪ್ಪ ಲವಾರೆ, ಮಲ್ಲಿಕಾರ್ಜುನ ಆಲಗೂಡೆ, ರುದ್ರೇಶ್ವರ ಗೋರಟಾ, ಅಮೃತಸಿಂಗ್ ಧಾಮಿ, ಮಹಾಂತಯ್ಯ ಮಠಪತಿ, ಮೇಘರಾಜ ನಾಗರಾಳೆ ಇದ್ದರು.

ಭಕ್ತರು ಸ್ವಾಮೀಜಿ ಅವರನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT