ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ಸ್ಯಾನಿಟೈಸರ್, ಮಾಸ್ಕ್‌ ವಿತರಣೆ

Last Updated 5 ಮೇ 2021, 5:10 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ಹಮಿಲಾಪುರದ ದಿ ಬುದ್ಧ ಯುತ್ ಕ್ಲಬ್ ವತಿಯಿಂದ ಬೀದರ್ ಗ್ರಾಮೀಣ ಪೊಲೀಸ್
ಠಾಣೆ ಸಿಬ್ಬಂದಿಗೆ ಸ್ಯಾನಿಟೈಸರ್
ಹಾಗೂ ಮಾಸ್ಕ್ ಉಚಿತವಾಗಿ ವಿತರಿಸಲಾಯಿತು.

ವಿ.ಎಂ. ರಾಂಪುರೆ ಪಬ್ಲಿಕ್ ಶಾಲೆ ಅಧ್ಯಕ್ಷರೂ ಆದ ಸಂಘದ ಅಧ್ಯಕ್ಷ ಮಹೇಶ ವಿ. ರಾಂಪುರೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಪಿಎಸ್‍ಐ ಸುವರ್ಣಾ ಅವರಿಗೆ ಸ್ಯಾನಿಟೈಸರ್‌ನ ಐದು ಲೀಟರ್ ಬಾಟಲಿ, 35 ಚಿಕ್ಕ ಬಾಟಲಿಗಳು ಹಾಗೂ 35 ಮಾಸ್ಕ್‌ಗಳನ್ನು ಹಸ್ತಾಂತರಿಸಿದರು.

‘ಕೊರೊನಾ ಸೋಂಕು ತಡೆಯುವಲ್ಲಿ ವೈದ್ಯರು, ಪೊಲೀಸರು, ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಬೀದರ್
ಗ್ರಾಮೀಣ ಪೊಲೀಸ್ ಠಾಣೆ, ನೆಹರೂ ಯುವ ಕೇಂದ್ರ ಹಾಗೂ ವಿ.ಎಂ. ರಾಂಪುರೆ ಶಾಲೆ ಸಹಯೋಗದಲ್ಲಿ ಉಚಿತ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದೆ’ ಎಂದು ಹೇಳಿದರು.

ಎಎಸ್‍ಐ ಶಿವಾಜಿ, ಸತೀಶ ರಾಮಖಾನೆ, ಆಕಾಶ ಹಾರೂರಗೇರಿ, ಸಚಿನ್ ಮೇತ್ರೆ, ಸತ್ಯವಾನ್ ಕಾಂಬಳೆ, ಕರುಣಶೀಲ ಸೋನಿ, ನೀಲಕಂಠ, ಸುಂದರ ಮೇಲ್ದೊಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT