ಬೀದರ್: ‘ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ನಗರ ಘಟಕದ ವತಿಯಿಂದ ನಗರದ ಸಂಕಟ ವಿಮೋಚನಾ ಹನುಮಾನ ದೇವಾಲಯದಲ್ಲಿ ಆಯೋಜಿಸಿದ್ದ ‘ನಮ್ಮ ಓಣಿ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಜಾಪ ನಗರ ಘಟಕದ ಯುವಕರು ಒಂದು ವರ್ಷದಿಂದ ನಿರಂತರ ಕ್ರಿಯಾಶೀಲರಾಗಿ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಾರ್ಯ ನಾಡಿನ ಎಲ್ಲಡೆ ನಡೆಯಬೇಕಿದೆ’ ಎಂದರು.

ಪತ್ರಕರ್ತ ಶಿವಕುಮಾರ ಸ್ವಾಮಿ ಮಾತನಾಡಿ, ‘ವಿದೇಶಿ ಸಂಸ್ಕೃತಿಯಿಂದ ಜನಪದ ಸಂಸ್ಕೃತಿಗೆ ಧಕ್ಕೆ ಬರುತ್ತಿದೆ’ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜೆ ಉದ್ಘಾಟಿಸಿದರು. ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಯೋಗೇಂದ್ರ ಯದಲಾಪುರೆ ಅಧ್ಯಕ್ಷತೆ ವಹಿಸಿದ್ದರು. ವಿಜಯಕುಮಾರ ಗುನ್ನಳ್ಳಿಕರ್ ಇದ್ದರು.

ಗುರುದಾಸ ಸ್ವಾಮಿ ಕಿರಣ ಸ್ವಾಮಿ ಹಿರೇಮಠ ಜನಪದ ಸಂಗೀತ ನಡೆಸಿಕೊಟ್ಟರು. ಬಸವರಾಜ ಹೆಗ್ಗೆ ಸ್ವಾಗತಿಸಿದರು. ಶ್ರೀಕಾಂತ ಪಾಟೀಲ ನಿರೂಪಿಸಿದರು. ಸಿದ್ದು ಫುಲಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.