ಔರಾದ್: ನಿತ್ಯ 5 ಕಿ.ಮೀ. ನಡೆದುಕೊಂಡು ಶಾಲೆಗೆ ಹೋಗಬೇಕು. ಬೆಳಿಗ್ಗೆ ಶಾಲೆಗೆ ಹೋದ ಹೆಣ್ಣು ಮಕ್ಕಳು ಮನೆ ಸೇರುವ ತನಕ ಆತಂಕದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿಯಿದೆ.

ತಾಲ್ಲೂಕಿನ ಮಾನೂರ(ಕೆ) ಗಡಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ. ಮಾನೂರ(ಕೆ)ದಲ್ಲಿ 1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯಿದೆ. ಮುಂದೆ 8 ರಿಂದ 10ನೇ ತರಗತಿವರೆಗೆ ಓದಲು 5 ಕಿ.ಮೀ. ದೂರದ ನಾಗಮಾರಪಳ್ಳಿ ಪ್ರೌಢಶಾಲೆಗೆ ಹೋಗಬೇಕು. ಆದರೆ ಅನೇಕ ವರ್ಷಗಳಿಂದ ಶಾಲೆಗೆ ಹೋಗಲು ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ನಡಿಗೆಯಲ್ಲಿಯೇ ತೆರಳಬೇಕಾಗಿದೆ.

ನಾಗಮಾರಪಳ್ಳಿ ಪ್ರೌಢ ಶಾಲೆಗೆ ಮಾನೂರ (ಕೆ)ಯಿಂದ ನಿತ್ಯ 35 ವಿದ್ಯಾರ್ಥಿಗಳು ಹೋಗುತ್ತಾರೆ. ಅವರಲ್ಲಿ 30 ವಿದ್ಯಾರ್ಥಿನಿಯರಿದ್ದು, ತಮ್ಮ ಮಕ್ಕಳು ಸಂಜೆ ಮನೆಗೆ ಬರುವ ತನಕ ಪಾಲಕರು ಆತಂಕದಲ್ಲೇ ಇರುತ್ತಾರೆ.

‘ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕಾದರೆ ಮನೆಯಿಂದ ಬೆಳಿಗ್ಗೆ 7.30ಕ್ಕೆ ಬಿಡಬೇಕು. ಸಂಜೆ 5 ಗಂಟೆಗೆ ಶಾಲೆ ಬಿಟ್ಟಾಗ ಮಕ್ಕಳು ಮನೆಗೆ ಬರಲು ಸಂಜೆ 6.30 ಆಗುತ್ತದೆ. ಈಗ ಚಳಿಗಾಲ ಇರುವುದರಿಂದ ಮಕ್ಕಳು ಮನೆಗೆ ಬರುವಷ್ಟರಲ್ಲಿ ಕತ್ತಲಾಗುತ್ತಿದೆ. ಇನ್ನು 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಇದ್ದರೆ ಇನ್ನಷ್ಟು ಕತ್ತಲಾಗಿ ಮಕ್ಕಳು ಮನೆಗೆ ಬಂದು ಸೇರುವ ತನಕ ಚಿಂತೆ ಇರುತ್ತದೆ’ ಎಂದು ಪಾಲಕರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಎಂಬ ಆಸೆಯಿದೆ. ಮಕ್ಕಳಲ್ಲೂ ಕಲಿಯುವ ಆಸಕ್ತಿಯಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಬಸ್ ಸೌಲಭ್ಯವಿದ್ದರೆ ನಿರಾತಂಕವಾಗಿ ನಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಬಹುದು. ಇಲ್ಲವಾದರೆ ನಮ್ಮ ಹಿರಿಯರು ಮಗಳನ್ನು ಶಾಲೆಗೆ ಕಳುಹಿಸುವುದು ಬೇಡ ಎನ್ನುತ್ತಿದ್ದಾರೆ’ ಎಂದು ಮಾನೂರ (ಕೆ) ಗ್ರಾಮದ ಪಾಲಕರಾದ ನಾಗನಾಥ ಪಂಚಾಳ ಹೇಳುತ್ತಾರೆ.

‘ಪಾಲಕರ ಸಭೆಗೆ ಹೋದಾಗ ಬಸ್ ಸೌಲಭ್ಯ ಕಲ್ಪಿಸಲು ಕೇಳಿದ್ದೇವೆ. ಶಿಕ್ಷಕರು ಸಾರಿಗೆ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಸಂಬಂಧಿತರು ನೋಡುತ್ತೇವೆ, ಮಾಡುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ’ ಎಂದು ಪಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾಗಮಾರಪಳ್ಳಿಯಲ್ಲಿ ಈ ಭಾಗದ ದೊಡ್ಡ ಸರ್ಕಾರಿ ಪೌಢ ಶಾಲೆ. 140 ಮಕ್ಕಳಿದ್ದಾರೆ. ನಾಲ್ಕೈದು ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಮಾನೂರ (ಕೆ)ಯಿಂದ ಬರುವ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಿದೆ. ಆದರೆ ಅವರಿಗೆ ಬಸ್ ಸೌಲಭ್ಯವಿಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ನಾವು ಅನೇಕ ಸಲ ಸಾರಿಗೆ ಸಂಸ್ಥೆ ಔರಾದ್ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದೇವೆ’ ಎಂದು ಶಾಲೆ ಶಿಕ್ಷಕರು ತಿಳಿಸಿದ್ದಾರೆ.

‘ಮಾನೂರ (ಕೆ) ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಬಸ್ ಸೌಲಭ್ಯವಿಲ್ಲದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಶಾಲೆಯವರು ಮನವಿ ಕೊಟ್ಟರೆ ಮೇಲಧಿಕಾರಿಗಳ ಗಮನಕ್ಕೆ ತಂದು ಬಸ್ ವ್ಯವಸ್ಥೆ ಮಾಡುತ್ತೇವೆ’ ಎಂದು ಸಾರಿಗೆ ಸಂಸ್ಥೆ ಇಲ್ಲಿಯ ಘಟಕ ವ್ಯವಸ್ಥಾಪಕ ರಾಜಶೇಖರ ತಾಳಘಾಟಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.