ಹುಮನಾಬಾದ್: ತಾಲ್ಲೂಕಿನ ಐತಿಹಾಸಿಕ ಸೀಮಿನಾಗನಾಥೇಶ್ವರ ಜಾತ್ರಾ ಮಹೋತ್ಸವವು ಆರಂಭವಾಗಿದ್ದು, ನ. 13ರವರೆಗೆ ನಡೆಯಲಿದೆ.

ಹಳ್ಳಿಖೇಡ್ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಆರಾಧ್ಯ ದೇವರಾಗಿದ್ದು, ಜಾತಿ, ಮತ, ಧರ್ಮ ಮೀರಿ ಎಲ್ಲರೂ ಒಗ್ಗೂಡಿ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಜಾತ್ರೆಯು ಒಟ್ಟು 6 ದಿನ ನಡೆಯಲಿದ್ದು, ರಾಜ್ಯ ಸೇರಿದಂತೆ ನೇರೆಯ ರಾಜ್ಯಗಳಾದ ಮಾಹಾರಾಷ್ಟ್ರ, ತೆಲಂಗಾಣ ಆಂಧ್ರ ಪ್ರದೇಶದ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

7ರಂದು ಮುಂಜಾನೆ ಮಹಾ ರುದ್ರಾಭಿಷೇಕ ಪೂಜೆ ಹಾಗೂ ಸಂಜೆ 6 ಗಂಟೆಗೆ ದೀಪಾರ್ಚನೆ ಹಾಗೂ ರಾತ್ರಿ ಡೊಳ್ಳು ಕುಣಿತ ಗಳಿಂದ ಪಲ್ಲಕ್ಕಿ ಉತ್ಸವ ನಡೆದವು.

8ರಂದು ಬೆಳಗಿನ ಜಾವ 5 ಗಂಟೆಗೆ ವಿವಿಧ ರೀತಿಯ ವರ್ಣರಂಜಿತ ಮದ್ದುಗುಂಡುಗಳ ಪ್ರದರ್ಶನದೊಂದಿಗೆ ಹಳ್ಳಿಖೇಡ್ ಚಿಕ್ಕಮಠ ಸಂಸ್ಥಾನದ ಪಂಡಿತಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ರಥೋತ್ಸವ ಜರುಗಲಿದೆ.

9ರಂದು ಮುಂಜಾನೆ ಮಹಾರುದ್ರಾಭಿಷೇಕ ಪೂಜೆ ಮಧ್ಯಾಹ್ನ 12.30ರಿಂದ ತೆಲಂಗಾಣ, ಮಹಾರಾಷ್ಟ್ರ ಕರ್ನಾಟಕದ ಕೇಸರಿ ಖ್ಯಾತ ಪೈಲ್ವಾನರಿಂದ ಜಂಗಿ ಕುಸ್ತಿಗಳು ನಡೆಯಲಿದೆ. ಸಂಜೆ 6 ಗಂಟೆಗೆ ದೀಪಾರ್ಚನೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. 10ರಂದು ಮುಂಜಾನೆ ಮಹಾ ರುದ್ರಾಭಿಷೇಕ ನಂತರ ಅಂತರರಾಜ್ಯಗಳ ವಿಶೇಷ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟಗಳಿ ಹಾಗೂ 5 ಗಂಟೆಗೆ ದೀಪಾರ್ಚನೆ ನಡೆಯಲಿದೆ.

11ರಂದು ಮುಂಜಾನೆ ಮಹಾರುದ್ರಾಭಿಷೇಕ ಪೂಜೆ ಮಧ್ಯಾಹ್ನ ಪಶು ಪ್ರದರ್ಶನ. 12ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, 16ರಂದು ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಜರುಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು. ಭಕ್ತರಿಗಾಗಿ ವಿಶೇಷವಾಗಿ ಅನ್ನದಾಸೋಹ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
–ನಾಗೇಶ ಪ್ರಭಾ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಜಾತ್ರಾ ಮಹೋತ್ಸವ ನಿಮಿತ್ತ ಹಳ್ಳಿಖೇಡ್ ಬಿ. ಪಟ್ಟಣಕ್ಕೆ ಹೆಚ್ಚುವರಿ ಬಸ್ ದಾಸೋಹದ ವ್ಯವಸ್ಥೆ ಮಾಡಲಾಗಿದೆ
–ಅಂಜುಂ ತಬಸುಮ್, ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.