ಸರ್ವರ್ ಡೌನ್ ಆಗಿದ್ದರಿಂದ ಮೊದಲ ದಿನ ಜಿಲ್ಲೆಯ ಕೆಲವೆಡೆ ಸಮಸ್ಯೆಯಾಗಿದೆ. ಒಟಿಪಿ ಬರಲು ವಿಳಂಬವಾಗಿದ್ದರಿಂದ ವಿವರ ದಾಖಲಿಸಲು ಸಮಸ್ಯೆಯಾಯಿತು. ಗಮನಕ್ಕೆ ತಂದ ನಂತರ ಸರಿಪಡಿಸಲಾಗಿದೆ.
–ಚನ್ನಬಸವ ಹೇಡೆ ಮಾಸ್ಟರ್ ಟ್ರೈನರ್
ಮೊದಲ ದಿನ ಕೆಲವೆಡೆ ಒಟಿಪಿ ಬರುವುದು ಸಮಸ್ಯೆಯಾಯಿತು. ಉಳಿದಂತೆ ಬೇರೆ ಯಾವುದೇ ರೀತಿಯ ಸಮಸ್ಯೆ ಎದುರಾಗಲಿಲ್ಲ. ಆದರೆ ಏನೇ ಸಮಸ್ಯೆ ಎದುರಾದರೂ ತಕ್ಷಣವೇ ‘ಟೆಕ್ನಿಕಲ್ ಟೀಮ್’ ನೆರವಿಗೆ ಬಂದು ಸರಿಪಡಿಸುತ್ತಿದೆ.
– ಸುನೀತಾ ಶಿವಾನಂದ ಜಿಲ್ಲಾ ಅಧಿಕಾರಿ ಹಿಂದುಳಿದ ವರ್ಗಗಳ ಇಲಾಖೆ
ಸೋಮವಾರ ಜಿಲ್ಲೆಯಾದ್ಯಂತ ಸಮೀಕ್ಷಾ ಕಾರ್ಯ ಆರಂಭಗೊಂಡಿದೆ. ಮೊದಲ ದಿನವಾಗಿದ್ದರಿಂದ ಅಲ್ಲಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ದಿನಕಳೆದಂತೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ.