ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಹೀನ್‍ಗೆ 400 ವೈದ್ಯಕೀಯ ಸೀಟು ನಿರೀಕ್ಷೆ

ನೀಟ್‍ನಲ್ಲಿ ಶ್ವೇತಾ, ಫಾತಿಮಾ ಅಮೋಘ ಸಾಧನೆ
Last Updated 2 ನವೆಂಬರ್ 2021, 14:01 IST
ಅಕ್ಷರ ಗಾತ್ರ

ಬೀದರ್: ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಅತ್ಯುತ್ತಮ ಸಾಧನೈದಿರುವ ಇಲ್ಲಿಯ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು, ಸರ್ಕಾರಿ ಕೋಟಾದಡಿ 400ಕ್ಕೂ ಅಧಿಕ ವೈದ್ಯಕೀಯ ಸೀಟುಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ.

ಈ ಬಾರಿ ಕಳೆದ ವರ್ಷಕ್ಕಿಂತ ಅಧಿಕ ಅಂದರೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಗಿಟ್ಟಿಸಲಿದ್ದಾರೆ. ಈವರೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ 1,900ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು 720 ರ ಪೈಕಿ 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಶ್ವೇತಾ ರಾಠೋಡ್ ಮತ್ತು ಫಾತಿಮಾ ಶೇಕ್ ತಲಾ 681 ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶ್ವೇತಾ ಅಖಿಲ ಭಾರತ ಮಟ್ಟದಲ್ಲಿ 808ನೇ ರ್‍ಯಾಂಕ್ (ಕೆಟೆಗರಿ ರ್‍ಯಾಂಕ್-16) ಹಾಗೂ ಫಾತಿಮಾ 847ನೇ ರ್‍ಯಾಂಕ್ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ನಿಶಾತ್ ಫಾತಿಮಾ 1,048ನೇ ರ್‍ಯಾಂಕ್, ಬುಶ್ರಾ ಐವನ್ 1,444ನೇ ರ್‍ಯಾಂಕ್, ಚನ್ನಬಸವ ಜಿ. 1961ನೇ ರ್‍ಯಾಂಕ್, ಫುರ್ಖಾನ್ ಅಬಿದ್ 2,052ನೇ ರ್‍ಯಾಂಕ್, ಸುಜಯ್ ಪಾಟೀಲ 2,459ನೇ ರ್‍ಯಾಂಕ್, ವಕ್ಕಾಸ್ ಅಹಮ್ಮದ್ 4,470ನೇ ರ್‍ಯಾಂಕ್, ಫಾತಿಮಾ ತನ್ವಿರ್ ಶೇಖ್ 4,990ನೇ ರ್‍ಯಾಂಕ್, ಫಾತಿಮಾ ಕೌಸರ್ 6,169ನೇ ರ್‍ಯಾಂಕ್ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಶೈಕ್ಷಣಿಕ ವಾತಾವರಣದಿಂದಾಗಿ ಕಾಲೇಜು ನೀಟ್, ಕೆಇಸಿಟಿಯಲ್ಲಿ ಪ್ರತಿ ವರ್ಷವೂ ಸಾಧನೆ ಮಾಡುತ್ತಲೇ ಇದೆ. ಕಳೆದ ವರ್ಷ ನೀಟ್‍ನಲ್ಲಿ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ ರೆಡ್ಡಿ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಹಾಗೂ ಅರ್ಬಾಜ್ 85ನೇ ರ್‍ಯಾಂಕ್ ಗಳಿಸಿದ್ದರು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT