ಬೀದರ್: ಪಟ್ಟಣ ಹಾಗೂ ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ದಾಖಲಿಸಿ ಬಗೆಹರಿಸಲು ಜೆಸ್ಕಾಂನಿಂದ ಎಸ್‌ಎಂಎಸ್ ಸೇವೆ ಆರಂಭಿಸಲಾಗಿದೆ.
ಈಗಾಗಲೇ ಗ್ರಾಹಕ ಸೇವಾ ಕೇಂದ್ರದ ಟೋಲ್ ಫ್ರೀ ಸಹಾಯವಾಣಿ, ವಾಟ್ಸ್‌ಆ್ಯಪ್ ಸಹಾಯವಾಣಿ ಕೆಲಸ ನಿರ್ವಹಿಸುತ್ತಿದೆ. ಎಸ್‌ಎಂಎಸ್ ಸೇವೆ ಈಗ ಹೊಸ ಸೇರ್ಪಡೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ, ಬಿಲ್ ಪಾವತಿ ಸೇರಿ ಇತರೆ ದೂರುಗಳನ್ನು 9769368959ಕ್ಕೆ ಎಸ್‌ಎಂಎಸ್ ಮೂಲಕ ದಾಖಲಿಸಬಹುದು.
ಗ್ರಾಹಕ ಸೇವಾ ಕೇಂದ್ರದಲ್ಲಿ ಸ್ವೀಕರಿಸಿದ ದೂರನ್ನು ಪಿಜಿಆರ್‌ಎಸ್ (ಸಾರ್ವಜನಿಕ ಕುಂದುಕೊರತೆ ಪರಿಹಾರ ವ್ಯವಸ್ಥೆ) ಸಾಫ್ಟ್‌ವೇರ್‌ನಲ್ಲಿ ತಕ್ಷಣವೇ ನೋಂದಾಯಿಸಿ, ಡಾಕೆಟ್ ಸಂಖ್ಯೆಯನ್ನು ಗ್ರಾಹಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ದೂರು ಪರಿಹರಿಸಲು ಸಂಬಂಧಿಸಿದ ಉಪವಿಭಾಗಾಧಿಕಾರಿಗಳಿಗೆ ತಿಳಿಸಲಾಗುತ್ತದೆ. ಸರ್ವೀಸ್ ಸ್ಟೇಷನ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ. ದೂರು ಪರಿಹರಿಸಿದ ನಂತರ ಗ್ರಾಹಕರಿಂದ ದೃಢೀಕರಣ ಪಡೆದು ದೂರು ಇತ್ಯರ್ಥಪಡಿಸಲಾಗುತ್ತದೆ. ಗ್ರಾಹಕರು ತಮ್ಮ ದೂರಿನ ಸ್ಥಿತಿಯನ್ನು ವೆಬ್‌ಸೈಟ್ http://pgrs.pragyaware.com/Home.aspx ನಲ್ಲಿ ಟ್ರ್ಯಾಕ್ ಮಾಡಬಹುದು.
ವಿದ್ಯುತ್ ಸಂಬಂಧಿತ ಯಾವುದೇ ಸಮಸ್ಯೆಗೆ 24X7 ಜೆಸ್ಕಾಂ ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ಅಥವಾ ಸಹಾಯವಾಣಿ ಸಂಖ್ಯೆ 9769368959 ಕ್ಕೆ ಎಸ್‌ಎಂಎಸ್ ಕಳುಹಿಸಬಹುದು. ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆಗೆ 9480847593 ಫೋಟೋ ಮತ್ತು ವಿಡಿಯೊ ತೆಗೆದು ಸ್ಥಳದ ವಿವರಗಳೊಂದಿಗೆ ಹಂಚಿಕೊಳ್ಳಬಹುದು ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.