ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನಲ್ಲಿ ಸಮಾಜ ಪರಿವರ್ತನೆ ಶಕ್ತಿ- ಸ್ವಾಮಿ ಶಿವಪ್ರೇಮಾನಂದಜಿ ಮಹಾರಾಜ

Last Updated 22 ಜನವರಿ 2022, 13:12 IST
ಅಕ್ಷರ ಗಾತ್ರ

ಬೀದರ್: ’ಸಮಾಜದಲ್ಲಿ ಪರಿವರ್ತನೆ ತರುವ ಸಾಮರ್ಥ್ಯ ಗುರುವಿಗೆ ಇದೆ. ಹೀಗಾಗಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದೆ‘ ಎಂದು ಪಶ್ಚಿಮ ಬಂಗಾಳದ ಜುಲ್ಪೆಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಶಿವಪ್ರೇಮಾನಂದಜಿ ಮಹಾರಾಜ ಅಭಿಪ್ರಾಯಪಟ್ಟರು.

ಇಲ್ಲಿನ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್ ಎಕ್ಸ್‌ಲೆನ್ಸ್ ವತಿಯಿಂದ ಶಿಕ್ಷಕರ ನೇಮಕಾತಿ ಪ್ರಯುಕ್ತ ಆಯೋಜಿಸಿದ್ದ ಸಿಇಟಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ತಮ್ಮ ಮಕ್ಕಳು ಇಂಜಿನಿಯರ್ ಹಾಗೂ ವೈದ್ಯರಾದರೆ ಮಾತ್ರ ಸಮಾಜದಲ್ಲಿ ಘನತೆ ಎಂದು ಪಾಲಕರು ಭಾವಿಸಿದ್ದಾರೆ. ಆದರೆ, ಅಂಥ ವೈದ್ಯರು, ಇಂಜಿನಿಯರ್‌ಗಳಿಗೆ ಶಿಕ್ಷಣದ ಗಟ್ಟಿ ತಳಪಾಯ ಹಾಕುವವರು ಶಿಕ್ಷಕರು ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.

’ಬಹಳಷ್ಟು ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಬಯಸುತ್ತಾರೆ. ಆದರೆ ಆ ಮಕ್ಕಳು ಶಿಕ್ಷಕರಾಗುವುದು ಅವರಿಗೆ ಇಷ್ಟ ಇರುವುದಿಲ್ಲ. ಬದುಕಿನಲ್ಲಿ ಮತ್ತು ಸತ್ತ ನಂತರವೂ ಸ್ಮರಿಸುವುದು ದಾರಿ ತೋರಿದ ಶಿಕ್ಷಕರನ್ನು ಮಾತ್ರ. ಮಕ್ಕಳನ್ನು ತಿದ್ದಿ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಹಿರಿದು‘ ಎಂದು ತಿಳಿಸಿದರು.

’ಶಿಕ್ಷಕರಾಗ ಬಯಸುವವರಲ್ಲಿ ಒಂದು ಕೆಲಸ ಸಿಕ್ಕರೆ ಸಾಕು ಎನ್ನುವ ಪ್ರವೃತ್ತಿ ಇರಬಾರದು. ಉತ್ತಮ ಬೋಧನೆ ಮಾಡುವ ಜತೆಗೆ ಮುಗುವಿನ ಭವಿಷ್ಯಉಜ್ವಲವಾಗಿ ರೂಪುಗೊಳ್ಳುವಂತೆ ಪಾಠ ಮಾಡಬೇಕು‘ ಎಂದು ಸಲಹೆ ನೀಡಿದರು.

ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾತನಾಡಿ, ಭಾವಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವೇಕಾನಂದ ಅಕಾಡೆಮಿ ಸ್ಥಾಪಿಸಲಾಗಿದೆ ಎಂದರು.

ಇಲ್ಲಿ ಅಧ್ಯಾತ್ಮ, ಗೋಸೇವೆ, ಕೃಷಿ ಜತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕುರಿತು ಬೋಧಿಸಲಾಗುತ್ತಿದೆ. ಭಾವಿ ಶಿಕ್ಷಕರಿಗೆ ಪರಿಣಿತರಿಂದ ಗುಣಮಟ್ಟದ ತರಬೇತಿ ನೀಡಲಾಗುತ್ತಿದೆ. ಬಹುತೇಕ ಕಡೆ ಸ್ಪರ್ಧಾತ್ಮಕ ಪರೀಕ್ಷೆಯ ಪೇಪರ್-1 (ಸಾಮಾನ್ಯ ಜ್ಞಾನ) ಬಗ್ಗೆ ತರಬೇತಿ ನೀಡುತ್ತಾರೆ. ಆದರೆ, ನಮ್ಮಲ್ಲಿ ಪೇಪರ್-1 ಹಾಗೂ ಪೇಪರ್-2 (ವಿಷಯವಾರು) ತರಬೇತಿ ಕೊಡಲಾಗುತ್ತಿದೆ. ಅಕಾಡೆಮಿಯಲ್ಲಿ ಈ ಹಿಂದೆ ತರಬೇತಿ ಪಡೆದವರಲ್ಲಿ 15 ಸಿಇಟಿ, 27 ಜನ ಟಿಇಟಿಯಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದರು.

ಮೂರು ತಿಂಗಳ ಸಿಇಟಿ ತರಬೇತಿಗೆ ಚಾಲನೆ ನೀಡಲಾಗಿದೆ. ಸಿಇಟಿ ಪರೀಕ್ಷೆ ಬರೆಯುವ ಆಸಕ್ತರು ತರಬೇತಿಯಲ್ಲಿ ಪಾಲ್ಗೊಳ್ಳಲು ಮೊ. 9448036608/9449274246/ 08482-224666ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಶಿಬಿರಾರ್ಥಿ ವಿಶಾಲ ಬಸವಕಲ್ಯಾಣ ಮಾತನಾಡಿ, ಧಾರವಾಡ, ಬೆಂಗಳೂರು ಇತರ ನಗರಕ್ಕೆ ಒಮ್ಮೆ ಬಸ್ಸಿಗೆ ಹೋಗಿ ಬರುವಷ್ಟು ಖರ್ಚಿನಲ್ಲಿ ಇಲ್ಲಿ ತರಬೇತಿ ಸಿಗುತ್ತಿದೆ. ಅಲ್ಲದೇ ಖಾಸಗಿ ಕೋಚಿಂಗ್‍ಗಿಂತ ವಿವೇಕಾನಂದ ಅಕಾಡೆಮಿಯಲ್ಲಿ ಸಿಗುವ ತರಬೇತಿ ಉತ್ಕೃಷ್ಟವಾಗಿದೆ‘ ಎಂದರು.

ಶಿಬಿರಾರ್ಥಿ ಮೇಘಾ ಮಾತನಾಡಿ, ಸಿಇಟಿ ಪರೀಕ್ಷೆ ದಿನಾಂಕ ಘೋಷಣೆ ನಂತರ ಬಹಳಷ್ಟು ವಿದ್ಯಾರ್ಥಿಗಳು ಸಿದ್ಧತೆಯಲ್ಲಿ ತೊಡಗುವುದು ಸಾಮಾನ್ಯ. ಆದರೆ ಪರೀಕ್ಷೆ ಮೊದಲೇ ನಾವು ಸಿದ್ಧತೆ ಮಾಡಿಕೊಳ್ಳುವುದು ಉತ್ತಮ. ಇದರಿಂದ ನಮಗೆ ಬಹಳಷ್ಟೂ ಅನುಕೂಲವಾಗಲಿದ್ದು, ಎಲ್ಲ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಅರಿಯಲು ಸಾಧ್ಯವಾಗುತ್ತದೆ ಎಂದರು.

ಅಕಾಡೆಮಿ ಸಂಯೋಜಕ ಬೀರಗೊಂಡ ಮೇತ್ರೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT