ಭಾಲ್ಕಿ: ತಾಲ್ಲೂಕಿನ ಬಾಜೋಳಗಾ ಸಮೀಪದ ಗೌರಿ ಸಕ್ಕರೆ ಹಾಗೂ ಡಿಸ್ಟಲರಿ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3,150 ಬೆಲೆ ಕೊಡಲಿದೆ’ ಎಂದು ಕಾರ್ಖಾನೆಯ ಮಾಲೀಕ ಬಾಬುರಾವ್ ಬೋತ್ರೆ ಪಾಟೀಲ ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ರೈತರಿಗೆ ಮೊದಲ ಕಂತಾಗಿ ಪ್ರತಿ ಟನ್ಗೆ ₹ 2,900, ದೀಪಾವಳಿಗೆ ₹100 ಸಂದಾಯ ಮಾಡಲಾಗುವುದು. ರಾಜ್ಯ ಸರ್ಕಾರ ₹50 ಪ್ರೋತ್ಸಾಹ ಧನ ನೀಡಲಿದ್ದು, ಒಟ್ಟು ₹ 3,050 ಬೆಲೆ ಪಾವತಿಸಿದಂತೆ ಆಗಲಿದೆ. ಏಪ್ರಿಲ್ ನಂತರ ಕಬ್ಬು ಪೂರೈಸುವವರಿಗೆ ₹100 ಹೆಚ್ಚುವರಿಯಾಗಿ ಅಂದರೆ ಟನ್ಗೆ ₹3,150 ಬೆಲೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

‘ಕಾರ್ಖಾನೆಯಲ್ಲಿ ತೂಕ ಸೇರಿದಂತೆ ಎಲ್ಲ ವ್ಯವಸ್ಥೆ ಪಾರದರ್ಶಕವಾಗಿದೆ. ಸಕಾಲಕ್ಕೆ ಕಬ್ಬು ಹಣ ಪಾವತಿಯಾಗಲಿದೆ. ಕಾರಣ, ರೈತರು ಕಾರ್ಖಾನೆಗೆ ಕಬ್ಬು ಪೂರೈಸಿ ಸಹಕರಿಸಬೇಕು’ ಎಂದು ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಮಹಾವೀರ ಘೋಡ್ಕೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.