ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಾಜಿ ನಿರ್ಣಯ ಬೆಂಬಲಿಸಿದ ತೆಲಂಗಾಣ ಬಸವ ದಳ

Last Updated 7 ಜನವರಿ 2022, 12:46 IST
ಅಕ್ಷರ ಗಾತ್ರ

ಬೀದರ್: ವಚನಾಂಕಿತ ಕುರಿತ ಕೂಡಲಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಅವರ ನಿರ್ಣಯಕ್ಕೆ ರಾಷ್ಟ್ರೀಯ ಬಸವ ದಳದ ತೆಲಂಗಾಣದ ಘಟಕಗಳು ಬೆಂಬಲ ವ್ಯಕ್ತಪಡಿಸಿವೆ.

ಕೂಡಲಸಂಗಮದಲ್ಲಿ ಜ. 12 ರಿಂದ 14 ರ ವರೆಗೆ ನಡೆಯಲಿರುವ ಶರಣ ಮೇಳದ ಪ್ರಯುಕ್ತ ಹೈದರಾಬಾದ್‍ನ ನಿತ್ಯಾ ಬಸವ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತಾಜಿ ಅವರ ನಿರ್ದೇಶನದಂತೆ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತನಾಮವನ್ನೇ ಬಳಸಲಾಗುವುದು ಎಂದು ಘಟಕಗಳ ಪದಾಧಿಕಾರಿಗಳು ಪ್ರಕಟಿಸಿದರು.

ಗುರುವಿನ ಆದೇಶ ಪಾಲನೆ ಭಕ್ತರ ಪರಮ ಕರ್ತವ್ಯವಾಗಿದೆ. ಮಾತಾಜಿ ಅವರ ಆದೇಶದಂತೆ ಬಸವ ತತ್ವ ಪ್ರಚಾರ ಹಾಗೂ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದು ಹೇಳಿದರು.

ತೆಲಂಗಾಣದಿಂದ ಅಪಾರ ಸಂಖ್ಯೆಯಲ್ಲಿ ಶರಣ ಮೇಳದಲ್ಲಿ ಪಾಲ್ಗೊಳ್ಳಲಿದ್ದೇವೆ. ಮೇಳದ ಯಶಸ್ವಿಗೆ ಸರ್ವ ರೀತಿಯಿಂದಲೂ ಶ್ರಮಿಸಲಿದ್ದೇವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತೆ ಗಂಗಾದೇವಿ ಅವರಿಗೆ ಭವ್ಯ ಸ್ವಾಗತ ನೀಡಿ ಪ್ರಚಾರ ಸಭೆಗೆ ಬರಮಾಡಿಕೊಂಡರು. ರಾಷ್ಟ್ರೀಯ ಬಸವ ದಳದ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ಶಂಕರೆಪ್ಪ ಪಾಟೀಲ, ಲಿಂಗಾಯತ ಧರ್ಮ ಮಹಾಸಭಾದ ತೆಲಂಗಾಣ ರಾಜ್ಯ ಘಟಕದ ಅಧ್ಯಕ್ಷ ವಿಜಯಕುಮಾರ ಪಟ್ನೆ, ಮುಖಂಡ ಅನಿಲ್ ಪಾಟೀಲ ಇದ್ದರು.

ರಾಷ್ಟ್ರೀಯ ಬಸವ ದಳದ ರಾಜ್ಯ, ಜಿಲ್ಲಾ, ನಗರ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT