ಮಂಗಳವಾರ, 10 ಮಾರ್ಚ್ 2026
×
ADVERTISEMENT

ಬೀದರ್‌ | ಪಾಪನಾಶಿನಿಗೆ ಮತ್ತೆ ಶಂಕುಸ್ಥಾಪನೆ ಪ್ರಧಾನಿ ಅಪಮಾನ

Published : 6 ಫೆಬ್ರುವರಿ 2026, 5:03 IST
Last Updated : 6 ಫೆಬ್ರುವರಿ 2026, 5:03 IST
ADVERTISEMENT
ಫಾಲೋ ಮಾಡಿ
Comments
‘ಪಾಪನಾಶ ಲಿಂಗದ ಮೇಲೆ ಆಣೆ ಪ್ರಮಾಣ ಮಾಡಲಿ’
ಒಂದುವೇಳೆ ಅಭಿವೃದ್ಧಿ ಕಾಮಗಾರಿ ಸಾಗರ ಖಂಡ್ರೆಯವರ ಪ್ರಯತ್ನದಿಂದ ಆಗಿದ್ದರೆ ಪಾಪನಾಶ ಶಿವಲಿಂಗದ ಮೇಲೆ ಕೈಯಿಟ್ಟು ಆಣೆ ಪ್ರಮಾಣ ಮಾಡಬೇಕು. ನಾನು ಕೂಡ ಬರುವೆ. ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರ ಖಂಡ್ರೆ ಸುಳ್ಳು ಹೇಳಬಾರದು’ ಎಂದು ಭಗವಂತ ಖೂಬಾ ಸವಾಲೆಸೆದರು. ಖಂಡ್ರೆ ರಾಜಕಾರಣ ಕೊನೆಯ ಹಂತದಲ್ಲಿದೆ. ದೀಪ ಆರುವಾಗ ಕೊನೆಯ ಗಳಿಗೆಯಲ್ಲಿ ಹೇಗೆ ಮಾಡುತ್ತದೋ ಅದೇ ರೀತಿ ಇವರ ವರ್ತನೆಯಾಗಿದೆ. ಇವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರೂ 2023ರ ಚುನಾವಣೆಯಲ್ಲಿ ಭಾಲ್ಕಿ ಕ್ಷೇತ್ರ ಬಿಟ್ಟು ಹೋಗದಂತೆ ಕಟ್ಟಿ ಹಾಕಿದ್ದೆ. 2028ರ ವಿಧಾನಸಭೆ ಚುನಾವಣೆಯಲ್ಲಿ ಭಾಲ್ಕಿಯಲ್ಲಿ ಬಿಜೆಪಿ ಶಾಸಕನನ್ನು ಗೆಲ್ಲಿಸಿಕೊಂಡು ಬರಲಿದ್ದು ಇದು ನನ್ನ ಮತ್ತೊಂದು ಸವಾಲು ಎಂದು ಹೇಳಿದರು.
‘ಖಂಡ್ರೆ ಅರಣ್ಯ ಸಚಿವರಾದ ನಂತರ ಪ್ರಾಣಿಗಳು ನಾಡೊಳಗೆ’
‘ಈಶ್ವರ ಬಿ. ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ಎಲ್ಲ ಪ್ರಾಣಿಗಳು ಕಾಡು ಬಿಟ್ಟು ನಾಡೊಳಗೆ ಬರುತ್ತಿವೆ. ರೈತರ ಮೇಲೆ ಅವುಗಳು ದಾಳಿ ನಡೆಸುತ್ತಿವೆ. ಹೊನ್ನಿಕೇರಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಅದನ್ನು ಹಿಡಿಯುತ್ತಿಲ್ಲ’ ಎಂದು ಮಾಜಿಶಾಸಕ ಪ್ರಕಾಶ ಖಂಡ್ರೆ ಕುಟುಕಿದರು. ಈಶ್ವರ ಖಂಡ್ರೆ ನಾಲ್ಕು ಸಲ ಭಾಲ್ಕಿ ಶಾಸಕರಾಗಿ ಎರಡು ಸಲ ಮಂತ್ರಿಯಾಗಿದ್ದಾರೆ. ಭಾಲ್ಕಿಯಲ್ಲಿ ನ್ಯಾಯವಾದಿಗಳ ಕಾಲೊನಿಗೆ ರಸ್ತೆ ಮಾಡಲು ಸಾಧ್ಯವಾಗಿಲ್ಲ. ಇವರು ಸಚಿವರು ಮಗ ಸಂಸದ ಇವರದ್ದೇ ಸರ್ಕಾರವಿದ್ದರೂ ಏನೂ ಮಾಡುತ್ತಿಲ್ಲ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT