ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭೆ ಕ್ಷೇತ್ರದಲ್ಲಿ 703 ಶತಾಯುಷಿಗಳು

110 ವರ್ಷ ವಯಸ್ಸಿನ ಇಬ್ಬರು, 120 ವರ್ಷ ಮೇಲಿನ ಏಳು ಜನ ಮತದಾರರು
Published 26 ಏಪ್ರಿಲ್ 2024, 7:45 IST
Last Updated 26 ಏಪ್ರಿಲ್ 2024, 7:45 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 703 ಜನ ಶತಾಯುಷಿ ಮತದಾರರಿದ್ದಾರೆ.110 ವರ್ಷ ವಯಸ್ಸಿನ ಮೇಲಿನವರು ಇಬ್ಬರು ಇದ್ದರೆ, 120 ವರ್ಷ ಮೇಲಿನ ಏಳು ಜನ ಮತದಾರರು ಇದ್ದಾರೆ.

100 ರಿಂದ 109 ವರ್ಷದೊಳಗಿನ ಅತಿ ಹೆಚ್ಚಿನ ಮತದಾರರು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ. ಒಟ್ಟು 128 ಮತದಾರರು ಅಲ್ಲಿದ್ದಾರೆ. ಇನ್ನು, ಎರಡನೇ ಸ್ಥಾನದಲ್ಲಿ ಹುಮನಾಬಾದ್‌, ಮೂರನೇ ಕ್ರಮಾಂಕದಲ್ಲಿ ಆಳಂದ ಕ್ಷೇತ್ರವಿದೆ. ಕ್ರಮವಾಗಿ 103 ಹಾಗೂ 101 ಮತದಾರರಿದ್ದಾರೆ.

ಚಿಂಚೋಳಿಯಲ್ಲಿ 94, ಭಾಲ್ಕಿಯಲ್ಲಿ 82, ಔರಾದ್‌ನಲ್ಲಿ 76, ಬೀದರ್‌ ದಕ್ಷಿಣದಲ್ಲಿ 72 ಹಾಗೂ ಬೀದರ್‌ನಲ್ಲಿ 47 ಅತಿ ಕಡಿಮೆ ಮತದಾರರಿದ್ದಾರೆ.

ಇನ್ನು, 110ರಿಂದ 119 ವರ್ಷದೊಳಗೆ ಒಟ್ಟು ಇಬ್ಬರು ಮತದಾರರಿದ್ದಾರೆ. ಹುಮನಾಬಾದ್‌ ಹಾಗೂ ಚಿಂಚೋಳಿಯಲ್ಲಿ ತಲಾ ಒಬ್ಬೊಬ್ಬರು ಇದ್ದಾರೆ. 120 ವರ್ಷ ಮೇಲಿನ 7 ಜನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವುದು ವಿಶೇಷ.

ಚಿಂಚೋಳಿ ಮತ್ತು ಆಳಂದದಲ್ಲಿ ತಲಾ ಮೂವರು, ಬಸವಕಲ್ಯಾಣದಲ್ಲಿ ಒಬ್ಬ ಮತದಾರರಿದ್ದಾರೆ. ಇನ್ನುಳಿದ ಕ್ಷೇತ್ರದಲ್ಲಿ ಈ ವಯಸ್ಸಿನ ಮತದಾರರೇ ಇಲ್ಲ.

ಮನೆಯಿಂದ 337 ಜನ ಹಕ್ಕು ಚಲಾವಣೆ:

ಈ ಸಲದ ಚುನಾವಣೆಯಲ್ಲಿ ಅಂಗವಿಕಲರು ಮತ್ತು 85 ವರ್ಷ ಮೇಲಿನವರಿಗೆ ಮನೆಯಿಂದಲೇ ಹಕ್ಕು ಚಲಾವಣೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 447 ಜನ ಮನೆಯಿಂದಲೇ ಮತ ಚಲಾವಣೆಗೆ ಆಸಕ್ತಿ ತೋರಿಸಿ, ಅರ್ಜಿ ಸಲ್ಲಿಸಿದ್ದಾರೆ.

ಏ.26ರಂದು ಹಾಗೂ ಏ.29ರಂದು ಎರಡು ದಿನ ಮನೆಯಿಂದಲೇ ಹಕ್ಕು ಚಲಾವಣೆಗೆ ದಿನಾಂಕ ಗೊತ್ತು ಮಾಡಲಾಗಿದೆ. ಮತಗಟ್ಟೆಯ ಸಿಬ್ಬಂದಿ ನೇರ ಮನೆಗೆ ತೆರಳಿ ಅವರಿಂದ ಗೌಪ್ಯವಾಗಿ ಮತಗಳನ್ನು ಪಡೆದುಕೊಳ್ಳುವರು.

ಜಿಲ್ಲೆಯಲ್ಲಿ ಒಟ್ಟು 22,110 ಅಂಗವಿಕಲರು ಇದ್ದಾರೆ. ಈ ಪೈಕಿ 141 ಜನ ಮನೆಯಿಂದ ಹಕ್ಕು ಚಲಾವಣೆಗೆ ಒಲವು ತೋರಿದ್ದಾರೆ. ಇನ್ನು, 14,548 ಮತದಾರರು 85 ವರ್ಷ ಮೇಲಿನವರಿದ್ದಾರೆ. ಇದರಲ್ಲಿ 318 ಜನ ಮನೆಯಿಂದಲೇ ಮತ ಚಲಾಯಿಸುವುದಾಗಿ ಅರ್ಜಿ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಬಂದ ನಂತರದಿಂದ ಇದುವರೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ನಾನು ಮತ ಹಾಕಿದ್ದೇನೆ. ಈ ಸಲವೂ ಹಕ್ಕು ಚಲಾಯಿಸುತ್ತೇನೆ.
–ಲಕ್ಷ್ಮಿಬಾಯಿ 110 ವರ್ಷ (ಭಾಲ್ಕಿ ತಾಲ್ಲೂಕಿನ ಕಪಲಾಪುರ ನಿವಾಸಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT