ಗುರುವಾರ , ಆಗಸ್ಟ್ 11, 2022
24 °C
ಹೊಸ ವಿಧಾನದ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ

ಮಾಸ್ಟರ್‌ ಟ್ರೇನರ್‌ಗಳಿಗೆ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗಾಗಿಯೇ ಸಿದ್ಧ ಪಡಿಸಲಾದ ಹೊಸ ವಿಧಾನದ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಕುರಿತು ಜಿಲ್ಲೆಯ 53 ಮಾಸ್ಟರ್‌ ಟ್ರೇನರ್‌ಗಳಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತರಬೇತಿ ನೀಡಲಾಯಿತು.

ತಾಲ್ಲೂಕು ಮಟ್ಟದಲ್ಲಿ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲಿರುವ ಮಾಸ್ಟರ್‌ ಟ್ರೇನರ್ಸ್‌ ಹಲವು ಪ್ರಶ್ನೆಗಳನ್ನು ಕೇಳುವ ತಮ್ಮ ಗೊಂದಲಗಳನ್ನು ನಿವಾರಿಸಿಕೊಂಡರು. ಇಬ್ಬರು, ಮೂವರು, ನಾಲ್ವರು ಹಾಗೂ ಐವರು ಸದಸ್ಯರು ಒಂದೇ ವಾರ್ಡ್‌ನಿಂದ ಸರ್ಧಿಸಿದರೆ ಮತಯಂತ್ರಗಳನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು. ಮತಯಂತ್ರವನ್ನು ಹೇಗೆ ಜೋಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್, ಮಾತನಾಡಿ, ‘ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ
ಮಾಸ್ಟರ್ ಟ್ರೇನರ್‌ಗಳು ಮೊದಲು ಪರಿಪೂರ್ಣ ತರಬೇತಿ ಪಡೆದು ಇತರರಿಗೆ ತಿಳಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹಾಗೂ ಜಿಲ್ಲಾ ಮಾಸ್ಟರ್‌ ಟ್ರೇನರ್ ಡಾ.ಗೌತಮ ಅರಳಿ ಅವರು ತಾಲ್ಲೂಕು ಮಟ್ಟದ ಮಾಸ್ಟರ್‌ ಟ್ರೇನರ್‌ಗಳಿಗೆ ಮಾರ್ಗದರ್ಶನ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.