ಮಂಗಳವಾರ, ಆಗಸ್ಟ್ 16, 2022
20 °C
ಶಿರಗಾಪುರದಲ್ಲಿ ಒಗ್ಗಟ್ಟು ತೋರಿದ ಗ್ರಾಮಸ್ಥರು

ಗ್ರಾ.ಪಂ ಸದಸ್ಯರ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಗಾಪುರ ಗ್ರಾಮದಲ್ಲಿನ ಎಲ್ಲ ಮೂರು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಸೋಮವಾರ ಅವಿರೋಧ ಆಯ್ಕೆ ನಡೆದಿದೆ.

ಇಲ್ಲಿ ಸುಮಾರು 700 ಮತದಾರರು ಇದ್ದಾರೆ. ಇಲ್ಲಿನ ಸಾಮಾನ್ಯ ಮಹಿಳೆಗೆ ಮೀಸಲಾದ ಸ್ಥಾನಕ್ಕೆ ಸಾವಿತ್ರಾ ರಾಜಕುಮಾರ ಯಾಚೆ, ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಸ್ಥಾನಕ್ಕೆ ಶಿವಶಂಕರ ಶಂಕರೆಪ್ಪ ಜಮಾದಾರ ಹಾಗೂ ಪರಿಶಿಷ್ಟ ಜಾತಿಗೆ ಮೀಸಲಾದ ಸ್ಥಾನಕ್ಕೆ ಮಾರುತಿ ಅಂಬಾರಾಯ ಸಜ್ಜನ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸ್ಥಾನಗಳಿಗೆ ಅಕಾಂಕ್ಷಿಗಳು ಇದ್ದರಾದರೂ ಅವಿರೋಧವಾಗಿ ಆಯ್ಕೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

‘ಚುನಾವಣೆ ನಡೆಸಿದರೆ ಸ್ಪರ್ಧಿಸಿದವರೆಲ್ಲರೂ ಹಣ ಖರ್ಚು ಮಾಡಬೇಕಾಗುತ್ತದೆ. ವೈರತ್ವವೂ ಬೆಳೆಯುತ್ತದೆ. ಆದ್ದರಿಂದ ಅವಿರೋಧ ಆಯ್ಕೆ ನಡೆಸುವುದು ಸೂಕ್ತ ಎಂಬ ಸಲಹೆ ಕೆಲವರು ನೀಡಿದ್ದರಿಂದ ಸಭೆ ಆಯೋಜಿಸಿ ಅಭಿಪ್ರಾಯ ಪಡೆಯಲಾಯಿತು. ಅದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು’ ಎಂದು ಗ್ರಾಮದ ಹಿರಿಯ ಮುಖಂಡ ರಾಜಕುಮಾರ ಪಾಟೀಲ ಹೇಳಿದ್ದಾರೆ.

ಸಭೆಯಲ್ಲಿ ಶಂಭುಲಿಂಗಯ್ಯ ಸ್ವಾಮಿ, ರಾಜಕುಮಾರ ಪಾಟೀಲ, ಬಸವರಾಜ ಪಾಟೀಲ, ನಾಮದೇವ ಶಿಂಪೆ, ಮಹಾಂತಪ್ಪ ಶಿರಸಂದ, ಹಣಮಂತ ಕಣಜೆ, ಯಶವಂತ ದಾಂಡಗೆ, ಮಲ್ಲೇಶಿ ಜಮಾದಾರ, ನಿಜಾಮಸಾಬ್ ನದಾಫ್, ಬಸವರಾಜ ಭೂತೆ, ಬಾಲಚಂದ್ರ ದಿವೆ, ಶರಣಬಸಪ್ಪ ಹಡಪದ, ಮಹಾದೇವ ನಾಟಿಕಾರ್, ಶಿವರಾಜ ಮೂಲಗೆ, ಮಹಾದಪ್ಪ ಮಾಂಗ, ಪಾಂಡುರಂಗ ಮಾಂಗ, ಶಿವಾನಂದ ಮಾಲಿಪಾಟೀಲ, ಮಾಧವರಾವ್ ಮಾಲಿಪಾಟೀಲ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು