ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಈರುಳ್ಳಿ, ಏರಿದ ಹಿರೇಕಾಯಿ

Last Updated 1 ಫೆಬ್ರುವರಿ 2020, 9:28 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಸ್ಥಿರವಾಗಿಲ್ಲ. ಒಂದು ತಿಂಗಳಿಂದ ಈರುಳ್ಳಿ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ₹1 ಸಾವಿರ ಏರಿಳಿತ ಉಂಟಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ₹1 ಸಾವಿರ ಇಳಿಕೆಯಾಗಿದೆ.

ಹಿರೇಕಾಯಿ, ಬೀನ್ಸ್‌ ಹಾಗೂ ಸಬ್ಬಸಗಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹1 ಸಾವಿರ ಹೆಚ್ಚಾಗಿದೆ. ಪಾಲಕ್‌ ಸೊಪ್ಪಿನ ಬೆಲೆ ಸಹ ಪ್ರತಿ ಕ್ವಿಂಟಲ್‌ಗೆ ₹500 ಏರಿಕೆಯಾಗಿದೆ.

ಗಜ್ಜರಿ ಹಾಗೂ ಮೆಂತೆ ಸೊಪ್ಪಿನ ಬೆಲೆ ₹1 ಸಾವಿರ ಹಾಗೂ ಆಲೂಗಡ್ಡೆಯ ಬೆಲೆ ಪ್ರತಿ ಕ್ವಿಂಟಲ್‌ಗೆ ₹500 ಕಡಿಮೆಯಾಗಿದೆ. ಬೆಳ್ಳುಳ್ಳಿ, ಎಲೆಕೋಸು, ಹೂಕೋಸು, ಬೀಟ್‌ರೂಟ್, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಟೊಮೆಟೊ ಹಾಗೂ ಕೊತಂಬರಿ ಬೆಲೆ ಸ್ಥಿರವಾಗಿದೆ.

ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್‌ನಿಂದ ಬೀನ್ಸ್, ತೊಂಡೆಕಾಯಿ, ಬೆಂಡೆಕಾಯಿ, ನುಗ್ಗೆಕಾಯಿ, ಟೊಮೆಟೊ ಆವಕವಾಗಿದೆ. ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಬದನೆಕಾಯಿ, ಎಲೆಕೋಸು, ಹೂಕೋಸು, ಕರಿಬೇವು ಹಾಗೂ ಕೊತಂಬರಿ ಬಂದಿದೆ.

‘ಬೀದರ್‌ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಂದ ಸೊಪ್ಪು ಬರುತ್ತಿಲ್ಲ. ಮದುವೆ, ಮುಂಜಿವೆ, ಶಾಲು ಕಿರಗುಣಿ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ಬೀನ್ಸ್‌ ಮತ್ತಿತರ ತರಕಾರಿಗಳ ಬೆಲೆ ಸಹಜವಾಗಿಯೇ ಹೆಚ್ಚಾಗಲಿದೆ’ ಎಂದು ಗಾಂಧಿಗಂಜ್‌ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ಹೇಳುತ್ತಾರೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ(ಪ್ರತಿ ಕೆ.ಜಿ.) ಕಳೆದ ವಾರ ಈ ವಾರ

ಈರುಳ್ಳಿ 50-60, 40-50
ಮೆಣಸಿನಕಾಯಿ 20-30, 20-25
ಆಲೂಗಡ್ಡೆ 25-30, 20-25
ಎಲೆಕೋಸು 15-20, 15-20
ಬೆಳ್ಳುಳ್ಳಿ 180-200, 180-200
ಗಜ್ಜರಿ 30-40, 20-30
ಬೀನ್ಸ್‌ 25-30, 30-40
ಬದನೆಕಾಯಿ 25-30, 20-30
ಮೆಂತೆ ಸೊಪ್ಪು 30-40, 25-30
ಹೂಕೋಸು 30-40, 30-40
ಸಬ್ಬಸಗಿ 20-30, 30-40
ಬೀಟ್‌ರೂಟ್‌ 50-60, 50-60
ತೊಂಡೆಕಾಯಿ 30-40, 30-40
ಕರಿಬೇವು 40-50, 60-70
ಕೊತಂಬರಿ 20-30, 20-30
ಟೊಮೆಟೊ 10-15, 10-15
ಪಾಲಕ್‌ 20-25, 20-30
ಬೆಂಡೆಕಾಯಿ 35-40, 30-40
ಹಿರೇಕಾಯಿ 35-40, 40-50
ನುಗ್ಗೆಕಾಯಿ 120-150, 140-150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT