ಗುರುವಾರ , ಅಕ್ಟೋಬರ್ 29, 2020
19 °C

ಬೀದರ್: ಮೆಂತೆ ಸೊಪ್ಪು ಕೆ.ಜಿಗೆ ₹ 100, ಹಿಗ್ಗಿದ ಹಿರೇಕಾಯಿ, ಬೆಂಡೆಕಾಯಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಲ್ಲಿಯ ಮಾರುಕಟ್ಟೆಯಲ್ಲಿ ಈ ಬಾರಿ ಎಲ್ಲ ತರಕಾರಿಗಳ ಬೆಲೆ ಹೆಚ್ಚಾಗಿದೆ. ಹಿರೇಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಹೆಚ್ಚಳವಾದರೆ, ಬೀನ್ಸ್‌ ಬೆಲೆ ₹ 8,500ಗೆ ಏರಿಕೆಯಾಗಿದೆ.

ಕೊತಂಬರಿ ಹಾಗೂ ಪಾಲಕ್‌ ಬೆಲೆ ₹ 3 ಸಾವಿರ, ಗಜ್ಜರಿ, ತೊಂಡೆಕಾಯಿ, ₹ 2 ಸಾವಿರ, ಸಬ್ಬಸಗಿ, ಕರಿಬೇವು ₹ 1,500, ಆಲೂಗಡ್ಡೆ, ಬೀಟ್‌ರೂಟ್ ಬೆಲೆ ₹ 500 ಹೆಚ್ಚಳವಾಗಿದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಕಡಿಮೆಯಾಗಿದೆ. ಎಲೆಕೋಸು ಹಾಗೂ ಹೂಕೋಸು ಬೆಲೆ ಮಾತ್ರ ಸ್ಥಿರವಾಗಿದೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಸೋಲಾಪುರದಿಂದ ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಹಸಿ ಮೆಣಸಿನಕಾಯಿ, ಅಲೂಗಡ್ಡೆ, ಬೆಂಡೆಕಾಯಿ, ಬೀಟ್‌ರೂಟ್‌, ತೊಂಡೆಕಾಯಿ ಹಾಗೂ ಬೀನ್ಸ್‌ ಆವಕವಾಗಿದೆ.

ಬೆಳಗಾವಿಯಿಂದ ನುಗ್ಗೆಕಾಯಿ, ಗಜ್ಜರಿ, ಬೆಂಗಳೂರು ಗ್ರಾಮಾಂತರ ಪ್ರದೇಶದಿಂದ ಟೊಮೆಟೊ, ಬೀದರ್‌, ಭಾಲ್ಕಿ ಹಾಗೂ ಚಿಟಗುಪ್ಪ ತಾಲ್ಲೂಕಿನಿಂದ ಹಿರೇಕಾಯಿ, ಬದನೆಕಾಯಿ, ಕೊತಬರಿ, ಕರಿಬೇವು, ಪಾಲಕ್, ಹೂಕೋಸು, ಮೆಂತೆ ಹಾಗೂ ಸಬ್ಬಸಗಿ ಬಂದಿದೆ.

‘ಈ ವಾರ ಮಳೆಯಿಂದಾಗಿ ಕೆಲ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ದುರ್ಗಾ ತರಕಾರಿ ಅಂಗಡಿ ಮಾಲೀಕ ಪ್ರಶಾಂತ ತಪಸಾಳೆ ಹೇಳುತ್ತಾರೆ
 

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ (ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ)

ಈರುಳ್ಳಿ 30-35,35-40
ಮೆಣಸಿನಕಾಯಿ 40-45, 40-45,
ಆಲೂಗಡ್ಡೆ 30-35, 35-40
ಬೆಳ್ಳುಳ್ಳಿ 140-150, 120-130
ಎಲೆಕೋಸು 60-70– 60-70
ಗಜ್ಜರಿ 20-30, 40-50
ಬೀನ್ಸ್‌ 30-35, 100-120
ಬದನೆಕಾಯಿ 30-40, 40-45
ಮೆಂತೆ ಸೊಪ್ಪು 50-60, 80-100
ಹೂಕೋಸು 40-50, 40-50
ಸಬ್ಬಸಗಿ 40-45, 50-60
ಬೀಟ್‌ರೂಟ್‌ 30-40, 40-45
ತೊಂಡೆಕಾಯಿ 15-20, 30-40
ಕರಿಬೇವು 20-25, 30-40
ಕೊತಂಬರಿ 45-50, 60-80
ಟೊಮೆಟೊ 30-40, 30-35
ಪಾಲಕ್‌ 20-30, 40-60
ಬೆಂಡೆಕಾಯಿ 30-35, 50-60
ಹಿರೇಕಾಯಿ 25-30, 60-80
ನುಗ್ಗೆಕಾಯಿ 60-70, 80-100

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು