ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ತುಟ್ಟಿಯಾಯ್ತು ಈರುಳ್ಳಿ, ಬೆಳ್ಳುಳ್ಳಿ

ಮಾರುಕಟ್ಟೆಯಲ್ಲಿ ನೋಡಲು ಸಿಗದ ನುಗ್ಗೆಕಾಯಿ
Last Updated 21 ಡಿಸೆಂಬರ್ 2019, 9:40 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಮಾರುಕಟ್ಟೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಮತ್ತೆ ತುಟ್ಟಿಯಾಗಿವೆ. ಕಳೆದ ವಾರಕ್ಕೆ ಹೋಲಿಸಿದರೆ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹ 20 ಹಾಗೂ ಬೆಳ್ಳುಳ್ಳಿ ಬೆಲೆ ₹ 40 ಹೆಚ್ಚಳವಾಗಿದೆ.

ರಾಜ್ಯದ ವಿವಿಧೆಡೆಯಿಂದ ಈರುಳ್ಳಿ ಬಂದ ಕಾರಣ ಕಳೆದ ವಾರ ಈರುಳ್ಳಿ ಬೆಲೆ ಕೆ.ಜಿ.ಗೆ ₹70ಕ್ಕೆ ಕುಸಿದಿತ್ತು. ಇದೀಗ ₹90ಕ್ಕೆ ಏರಿದೆ. ಕೆ.ಜಿ.ಗೆ ₹180 ಇದ್ದ ಬೆಳ್ಳುಳ್ಳಿ ಬೆಲೆ ₹ 200ಕ್ಕೆ ತಲುಪಿದೆ.

ಈರುಳ್ಳಿ ಬೆಲೆ ಸಹಜ ಸ್ಥಿತಿಗೆ ಬರದ ಕಾರಣ ಇನ್ನೂ ಗ್ರಾಹಕರು ಅಧಿಕ ಪ್ರಮಾಣದಲ್ಲಿ ಈರುಳ್ಳಿ ಖರೀದಿಸುತ್ತಿಲ್ಲ. ಹಿಂದೆ ಕೆ.ಜಿ. ಲೆಕ್ಕದಲ್ಲಿ ಖರೀದಿಸುತ್ತಿದ್ದವರು ಈಗ 250 ಗ್ರಾಂ., 500 ಗ್ರಾಂ. ಖರೀದಿ ಮಾಡುತ್ತಿದ್ದಾರೆ. ಆಹಾರದ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಕೇಳಿಯೇ ಅನೇಕರು ಒಲ್ಲೆ ಎನ್ನುತ್ತಿದ್ದಾರೆ.

ಗಜ್ಜರಿ ಬೆಲೆ ಕೆ.ಜಿ.ಗೆ ₹ 60 ರಿಂದ ₹ 40ಕ್ಕೆ ಇಳಿಕೆಯಾಗಿದೆ. ₹ 700ಗೆ ಕೆ.ಜಿ. ಆಗಿರುವ ಕಾರಣ ನುಗ್ಗೆಕಾಯಿ ನಗರದ ಮಾರುಕಟ್ಟೆಯಲ್ಲಿ ಮಾಯವಾಗಿದೆ. ಮೆಣಸಿನಕಾಯಿ, ಬೀನ್ಸ್, ಆಲೂಗಡ್ಡೆ, ಎಲೆಕೋಸು, ಹೂಕೋಸು, ಸಬ್ಬಸಗಿ, ಬೀಟ್‌ರೂಟ್‌ ಬೆಲೆ ಸ್ಥಿರವಾಗಿದೆ.

ನಗರದ ಮಾರುಕಟ್ಟೆಗೆ ಸೋಲಾಪೂರದಿಂದ ಈರುಳ್ಳಿ, ಬೆಳ್ಳುಳ್ಳಿ, ಆಗ್ರಾದಿಂದ ಆಲೂಗಡ್ಡೆ, ಹೈದರಾಬಾದ್‌ನಿಂದ ಮೆಣಸಿನಕಾಯಿ, ಬೀನ್ಸ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ, ಟೊಮೆಟೊ ಆವಕವಾಗಿದೆ. ಬದನೆಕಾಯಿ, ಹಿರೇಕಾಯಿ ಮೊದಲಾದವು ಜಿಲ್ಲೆಯ ವಿವಿಧೆಡೆಯಿಂದ ಬಂದಿವೆ ಎಂದು ತಿಳಿಸುತ್ತಾರೆ ಗಾಂಧಿಗಂಜ್ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ

ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
ಈರುಳ್ಳಿ 60-70 80-90
ಮೆಣಸಿನಕಾಯಿ 20-25 20-25
ಆಲೂಗಡ್ಡೆ 25-30 25-30
ಎಲೆಕೋಸು 20-25 20-25
ಬೆಳ್ಳುಳ್ಳಿ 160-180 180-200
ಗಜ್ಜರಿ 50-60 30-40
ಬೀನ್ಸ್‌ 40-50 40-50
ಬದನೆಕಾಯಿ 30-40 20-30
ಮೆಂತೆ ಸೊಪ್ಪು 25-30 15-20
ಹೂಕೋಸು 40-50 40-50
ಸಬ್ಬಸಗಿ 20-30 20-30
ಬೀಟ್‌ರೂಟ್‌ 50-60 50-60
ತೊಂಡೆಕಾಯಿ 30-40 30-40
ಕರಿಬೇವು 30-40 40-50
ಕೊತಂಬರಿ 30-40 15-20
ಟೊಮೆಟೊ 15-20 15-20
ಪಾಲಕ್‌ 20-30 20-25
ಬೆಂಡೆಕಾಯಿ 30-40 35-40
ಹಿರೇಕಾಯಿ 50-60 40-50
ನುಗ್ಗೆಕಾಯಿ 600-700 600-700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT