ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲನಗರ: ನೀರಿನ ಟ್ಯಾಂಕ್‌ ಸ್ವಚ್ಚಗೊಳಿಸಲು ಸೂಚನೆ

Published 24 ಮೇ 2024, 16:21 IST
Last Updated 24 ಮೇ 2024, 16:21 IST
ಅಕ್ಷರ ಗಾತ್ರ

ಕಮಲನಗರ: ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ ಸ್ವಚ್ಚ ಮಾಡಿಸಬೇಕು. ಹಾಳಾಗಿರುವ ಪೈಪ್‌ಗಳನ್ನು ಹಾಗೂ ಬಾವಿಗಳನ್ನು ಕೂಡ ಸ್ವಚ್ಚ ಮಾಡಿಸಬೇಕು ಎಂದು ತಾಲ್ಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಘಾಟೆ ಸೂಚನೆ ನೀಡಿದರು.

ಮಳೆಗಾಲದೊಳಗೆ ಗ್ರಾಮಗಳಲ್ಲಿರುವ ಟ್ಯಾಂಕರ್‌ಗಳನ್ನು ಶುದ್ಧಗೊಳಿಸಿ ನೀರನ್ನು ಶೇಖರಣೆ ಮಾಡಬೇಕು. ಯಾವ ದಿನಾಂಕದಂದು ಟ್ಯಾಂಕ ಸ್ವಚ್ಚಗೊಳಿಸಲಾಗಿದೆ ಎಂಬ ದಿನಾಂಕ ಬರೆದಿಡಬೇಕು. ಕುಡಿಯುವ ನೀರಿನ್ನು ಪರಿಕ್ಷಿಸಲು ವಾಟರ್‌ಮ್ಯಾನ್‌ಗಳಿಗೆ ತಿಳಿಸಬೇಕು ಎಂದರು.

ಮಳೆಗಾಲದ ಸಂದರ್ಭದಲ್ಲಿ ಹೊಸ ನೀರು ಬರುವುದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಆದರಿಂದ ಎಲ್ಲಾ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಜನರಿಗೆ ನೀರು ಕಾಯಿಸಿ ಆರಿಸಿ ಕುಡಿಯಲು ತಿಳಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT