ಭಾಲ್ಕಿ: ‘ಮಹಾಜ್ಞಾನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಜ್ಞಾನ ಸೂರ್ಯ ಆಗಿದ್ದರು’ ಎಂದು ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶದ ಘನತೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಅಂಬೇಡ್ಕರ್ಗೆ ಸಲ್ಲುತ್ತದೆ. ಅವರು ತಮ್ಮ ಸತತ ಕಠಿಣ ಪರಿಶ್ರಮ, ಅಪಾರ ಜ್ಞಾನ, ಹೋರಾಟದಿಂದ ಇಡೀ ಜಗತ್ತಿಗೆ ಮಾದರಿಯಾಗಿದ್ದರು ಎಂದು ತಿಳಿಸಿದರು.

ಸಿಂಡಿಕೇಟ್ ಸದಸ್ಯ ಶಾಂತಲಿಂಗ ಸಾವಳಗಿ ಮಾತನಾಡಿ, ‘ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಆಡಳಿತ ಸುಸೂತ್ರವಾಗಿ ನಡೆದಿರುವುದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ’ ಎಂದರು.

ಕುಲಪತಿ ಬಿ.ಎಸ್.ಬಿರಾದಾರ ಮಾತನಾಡಿ, ‘ದೀನ–ದುರ್ಬಲರಿಗೆ ಸ್ವಾತಂತ್ರ್ಯ ಹಾಗೂ ಸಮಾನತೆ ದೊರೆತದ್ದು ಅಂಬೇಡ್ಕರರು ನೀಡಿದ ಸಂವಿಧಾನದಿಂದ. ಸಂವಿಧಾನದಿಂದಾಗಿ ನಮಗೆ ಶಿಕ್ಷಣ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತದಾನ ಸೇರಿದಂತೆ ಇತರ ಹಕ್ಕುಗಳು ನಮಗೆ ದೊರೆತಿವೆ’ ಎಂದು ಹೇಳಿದರು.

ಆಡಳಿತ ಕುಲಸಚಿವೆ ಸುರೇಖಾ, ಸಿಂಡಿಕೇಟ್ ಸದಸ್ಯರಾದ ಶಿವನಾಥ ಎಂ.ಪಾಟೀಲ, ವೈಷ್ಣವಿ ಪಾಟೀಲ, ಮೌಲ್ಯಮಾಪನ ಕುಲಸಚಿವ ಪರಮೇಶ್ವರ ನಾಯ್ಕ ಟಿ., ವಿಶೇಷಾಧಿಕಾರಿ ರವೀಂದ್ರನಾಥ.ವಿ.ಗಬಾಡಿ, ಪಂಚಶೀಲ, ಸುಹಾಸಿನಿ ಟಿ., ಅರುಣಕುಮಾರ ಬೇಂದ್ರೆ, ಆನಂದ ಚಾಕೂರೆ, ರಾಮಚಂದ್ರ ಗಣಾಪೂರ ಹಾಜರಿದ್ದರು.

ಕಾರ್ಯಕ್ರಮಕ್ಕೂ ಮೊದಲು ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಆಣದೂರವರೆಗೆ ಪಾದಯಾತ್ರೆ ಕೈಗೊಂಡು ಅಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿದರು. ನಂತರ ಪ್ರತಿಮೆಯ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆಯನ್ನು ಪಠಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.