ಮಂಗಳವಾರ, ಜನವರಿ 28, 2020
24 °C

‘ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಶಿಕ್ಷಕ, ಶಿಕ್ಷಕಿಯರು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ತಿಳಿದರು.

ಪಟ್ಟಣದ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ವಿಶ್ವೇಶ್ವರಯ್ಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ‘ಯೋಜನಾ ದಿನಾಚರಣೆ ಮತ್ತು ಶೈಕ್ಷಣಿಕ ವಸ್ತು ಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಧುನಿಕ ಯುಗದಲ್ಲಿ ಶಿಕ್ಷಕರು ಮಕ್ಕಳಿಗೆ ಹೊಸ, ಹೊಸ ವಿಷಯಗಳನ್ನು ತಿಳಿಸಿಕೊಡಬೇಕು. ವೈಜ್ಞಾನಿಕ ಮನೋಭಾವ ಮೂಡಿಸಬೇಕು’ ಎಂದರು.

ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದ, ಸಂಸ್ಥೆ ಅಧ್ಯಕ್ಷ ರಾಜಕುಮಾರ ಕೆ.ಭೂರೇಶ ಮಾತನಾಡಿದರು.

ಶಾಲೆಯ ಮುಖ್ಯಶಿಕ್ಷಕ ಡ್ಯಾನಿಯಲ್ ಕೆ.ಭೂರೇಶ, ವಿಶ್ವಭಾರತಿ ಕನ್ನಡ ಮಾದ್ಯಮ ಶಾಲೆಯ ಮುಖ್ಯಶಿಕ್ಷಕಿ ವನಜಾಕ್ಷಿ, ಸಂಪತಿ, ಗೀತಾ, ಕಾವೇರಿ, ಸವಿತಾ, ನಿರ್ಮಲಾ, ಪೂಜಾ, ದೀಪಿಕಾ, ಸಿದ್ಧಾರ್ಥ ಹಾಗೂ ಸಂಗಮೇಶ ಇದ್ದರು.

ಆರತಿ ನಿರೂಪಿಸಿದರು. ಹೀನಾ ಅಂಜುಮ್ ಸ್ವಾಗತಿಸಿದರು. ರಂಜನಾ ವಂದಿಸಿದರು.

ಪ್ರತಿಕ್ರಿಯಿಸಿ (+)