ಅಕ್ಕ ಕೆಫೆ ತೆರೆಯಲು ಸೂಕ್ತ ಸ್ಥಳ ದೊರೆತರೆ ತಾಲ್ಲೂಕಿಗೊಂದು ಹೋಟೆಲ್ ತೆರೆಯಲಾಗುವುದು, ಮಹಿಳೆಯರ ಸ್ವಉದ್ಯಮ ಸ್ಥಾಪಿಸುವ ಕನಸು ನನಸು ಮಾಡಲಾಗುವುದು
ಮೋನಾ ರೋತ್, ಜಿ.ಪಂ. ಸಿಇಒ
‘ಬಜೆಟ್‌ನಲ್ಲಿ ಘೋಷಣೆ’
ದುಡಿಯುವ ಕೈಗಳಿಗೆ ಉದ್ಯೋಗ ನೀಡುವ, ಸ್ತ್ರೀಶಕ್ತಿ ಸಂಘಗಳನ್ನು ಬಲಗೊಳಿಸುವ ಹಾಗೂ ಮಹಿಳೆಯರು ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪೂರಕವಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಅಕ್ಕ ಕೆಫೆಗಳನ್ನು ತೆರೆಯುವುದಾಗಿ ಘೋಷಿಸಿತ್ತು. ಅದರಂತೆ ರಾಜ್ಯದಾದ್ಯಂತ ಅಕ್ಕ ಕೆಫೆಗಳು ತಲೆ ಎತ್ತುತ್ತಿದ್ದು ಜಿಲ್ಲೆಯಲ್ಲೂ ಎರಡು ಹೋಟೆಲ್‌ಗಳು ಆರಂಭವಾಗಲಿವೆ.