ಬೆಂಗಳೂರು: ಈ ಸಲದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಎಲ್ಲರ ಚಿತ್ತ ‘ತಾರಾ ವರ್ಚಸ್ಸು’ ಇರುವ ಆಟಗಾರರ ಮೇಲೆ ನೆಟ್ಟಿತ್ತು. ಆದರೆ ಗುರುವಾರ ಆರಂಭವಾಗಲಿರುವ ದಕ್ಷಿಣ ವಲಯ ಮತ್ತು ಕೇಂದ್ರ ವಲಯ ತಂಡಗಳ ನಡುವಣ ಫೈನಲ್ ಪಂದ್ಯದಲ್ಲಿ ಉದಯೋನ್ಮುಖ ಆಟಗಾರರ ಮೇಲೆ ಎಲ್ಲರ ಗಮನ ಇದೆ.

ಏಕೆಂದರೆ; ಸ್ಟಾರ್ ಆಟಗಾರರೆಲ್ಲರೂ ಈಗ ಭಾರತ ಮತ್ತು ಭಾರತ ಎ ತಂಡಗಳಿಗೆ ಆಯ್ಕೆಯಾಗಿ ಹೋಗಿದ್ದಾರೆ. ಆದ್ದರಿಂದ ದಕ್ಷಿಣ ತಂಡದಲ್ಲಿ ಆಡಲಿರುವ ಕರ್ನಾಟಕದ ಉದಯೋನ್ಮುಖ ಬ್ಯಾಟರ್ ಆರ್. ಸಮರ್ಥ್, ತಮಿಳುನಾಡಿನ ವೇಗಿ ಗುರ್ಜಪನೀತ್ ಸಿಂಗ್, ಕೇಂದ್ರ ತಂಡದಲ್ಲಿರುವ ದನೀಶ್ ಮಾಳೆವರ್, ಕಾರ್ತಿಕೇಯ ಸಿಂಗ್ ಮತ್ತು ಶುಭಂ ಶರ್ಮಾ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಹಾಗೆ ನೋಡಿದರೆ; ಸದ್ಯ ಭಾರತ ತಂಡದಲ್ಲಿ ಆಡುತ್ತಿರುವ ಖ್ಯಾತನಾಮ ಆಟಗಾರನೆಂದರೆ ರಜತ್ ಪಾಟೀದಾರ್ ಒಬ್ಬರೇ. ಅವರು ಕೂಡ ರಾಷ್ಟ್ರೀಯ ತಂಡಕ್ಕೆ ಮರಳುವ ಛಲದಲ್ಲಿದ್ದಾರೆ. ಐಪಿಎಲ್ ಟೂರ್ನಿಯ ಹದಿನೆಂಟು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿ (2025) ಜಯಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವನ್ನು ಮುನ್ನಡೆಸಿದ್ದರು. ಇದೀಗ ಕೇಂದ್ರ ವಲಯದ ನಾಯಕರಾಗಿದ್ದಾರೆ. ಕೇರಳದ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ದಕ್ಷಿಣ ವಲಯ ಆಡಲಿದೆ.

ಕಳೆದ ರಣಜಿ ಋತುವಿನಲ್ಲಿ ಸ್ಮರಣ್ ಅವರು ಏಳು ಪಂದ್ಯಗಳಲ್ಲಿ ಆಡಿದ್ದರು. ಎರಡು ಶತಕಗಳಿದ್ದ 516 ರನ್ಗಳನ್ನು ಕಲೆಹಾಕಿದ್ದರು. 64.50ರ ಸರಾಸರಿಯಲ್ಲಿ ಅವರು ರನ್ ಗಳಿಸಿದ್ದರು. ಲಿಸ್ಟ್ ಎ ಮತ್ತು ಟಿ20 ಪಂದ್ಯಗಳಲ್ಲಿಯೂ ಅವರು ಗಮನ ಸೆಳೆಯುವಂತಹ ಬ್ಯಾಟಿಂಗ್ ಮಾಡಿದ್ದರು.10 ಲಿಸ್ಟ್ ಎ ಪಂದ್ಯಗಳಲ್ಲಿ 433 ರನ್ ಮತ್ತು ಆರು ಟಿ20 ಪಂದ್ಯಗಳಲ್ಲಿ 170 ರನ್ ಕಲೆಹಾಕಿದ್ದರು. ಆದ್ದರಿಂದ 22 ವರ್ಷದ ಎಡಗೈ ಬ್ಯಾಟರ್ ಸ್ಮರಣ್ ಮೇಲೆ ಈಗ ಆಯ್ಕೆ ಸಮಿತಿಯ ನಿಗಾ ಇರುವುದು ಸಹಜ. ಅದಕ್ಕೆ ತಕ್ಕಂತೆ ತಮ್ಮ ಲಯವನ್ನು ಕಾಪಾಡಿಕೊಳ್ಳುವ ಸವಾಲು ಸ್ಮರಣ್ ಅವರಿಗೆ ಇದೆ. ಅವರೊಂದಿಗೆ 19 ವರ್ಷದ ಆ್ಯಂಡ್ರೆ ಸಿದ್ಧಾರ್ಥ್ ಅವರು ಕೂಡ ಕಳೆದ ಋತುವಿನ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 612 ರನ್ ಗಳಿಸಿದ್ದರು. ಅದರೊಂದಿಗೆ ದೇಶಿ ಕ್ರಿಕೆಟ್ ಪಯಣವನ್ನು ಭರ್ಜರಿಯಾಗಿ ಆರಂಭಿಸಿದ್ದರು. ಎನ್. ಜಗದೀಶನ್ ಮತ್ತು ದೇವದತ್ತ ಪಡಿಕ್ಕಲ್ ಅವರ ಸ್ಥಾನಗಳನ್ನು ಸಮರ್ಥವಾಗಿ ತುಂಬಬೇಕಾದ ಜವಾಬ್ದಾರಿ ಇವರಿಬ್ಬರ ಮೇಲೆ ಇದೆ.

ಜಗದೀಶನ್ ಪಡಿಕ್ಕಲ್ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವುದು ಸಂತಸದ ಸಂಗತಿ. ಕಳೆದ ಮೂರು ವರ್ಷಗಳಿಂದ ಅವರಿಬ್ಬರೂ ಉತ್ತಮವಾಗಿ ಆಡಿದ್ದಾರೆ. ಅವರ ಬದಲಿಗೆ ಆಡಲು ನಮ್ಮಲ್ಲಿ ಪ್ರತಿಭಾವಂತರಿದ್ದಾರೆ.
–ಮೊಹಮ್ಮದ್ ಅಜರುದ್ದೀನ್, ದಕ್ಷಿಣ ವಲಯ ತಂಡದ ನಾಯಕ

ಕೇಂದ್ರ ತಂಡದ ದನೀಶ್ ಮಾಳೆವರ್ ಇದೇ ಟೂರ್ನಿಯ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ನಲ್ಲಿ ಕ್ರಮವಾಗಿ 203 ಮತ್ತು 76 ರನ್ ಗಳಿಸಿದ್ದಾರೆ. ವಿದರ್ಭದ 21 ವರ್ಷದ ಆಟಗಾರ ಒಟ್ಟು 11 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಮೂರು ಶತಕ ದಾಖಲಿಸಿದ್ದಾರೆ. ಈ ಎಲ್ಲ ‘ಪ್ರಥಮ ಋತುವಿನ ಪ್ರತಿಭೆ’ಗಳಲ್ಲದೇ ಅನುಭವಿ ರಜತ್ 33 ವರ್ಷದ ವೇಗಿ ದೀಪಕ್ ಚಾಹರ್ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಿದ್ಧರಾಗಿದ್ದಾರೆ.

ಪಂದ್ಯ ನಡೆಯಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಪಿಚ್ನಲ್ಲಿ ಈ ಹಿಂದೆ ನಡೆದ ಪಂದ್ಯಗಳಲ್ಲಿ ಯಥೇಚ್ಛವಾಗಿ ರನ್ಗಳು ಹರಿದಿವೆ. ವೇಗದ ಬೌಲರ್ಗಳು ಪರದಾಡಿದ್ದಾರೆ. ಆದ್ದರೆ ಉಭಯ ತಂಡಗಳೂ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಣಕ್ಕಿಳಿಸುವುದು ಖಚಿತ. ಇದರಿಂದಾಗಿ ರನ್ಗಳ ಹೊಳೆ ಹರಿದರೂ ಅಚ್ಚರಿ ಪಡಬೇಕಿಲ್ಲ.

ತಂಡಗಳು

ದಕ್ಷಿಣ ವಲಯ: ಮೊಹಮ್ಮದ್ ಅಜರುದ್ದೀನ್ (ನಾಯಕ–ವಿಕೆಟ್ಕೀಪರ್) ರಿಕಿ ಭುಯ್ (ಉಪನಾಯಕ) ಆರ್. ಸ್ಮರಣ್ ಎಂ. ಕಾಳೆ ಶೇಖ್ ರಶೀದ್ ತನ್ಮಯ್ ಅಗರವಾಲ್ ಸಲ್ಮಾನ್ ನಿಜಾರ್ ಆ್ಯಂಡ್ರೆ ಸಿದ್ಧಾರ್ಥ್ ತನಯ್ ತ್ಯಾಗರಾಜನ್ ಗುರ್ಜಪನೀತ್ ಸಿಂಗ್ ಎಂ.ಡಿ. ನಿಧೀಶ್ ವಿ. ಕೌಶಿಕ್ ಅಂಕಿತ್ ಶರ್ಮಾ ಟಿ ವಿಜಯ್ ಎನ್.ಪಿ. ಬಾಸಿಲ್.

ಕೇಂದ್ರ ವಲಯ: ರಜತ್ ಪಾಟೀಲ (ನಾಯಕ) ಆಯುಷ್ ಪಾಂಡೆ ದನೀಶ್ ಮಳೆವಾರ್ ಶುಭಂ ಶರ್ಮಾ ಸಂಚಿತ್ ದೇಸಾಯಿ ಯಶ್ ರಾಥೋಡ್ ನಚಿಕೇತ್ ಭೂತೆ ಕುಮಾರ ಕಾರ್ತಿಕೇಯ ಸಿಂಗ್ ಆದಿತ್ಯ ಠಾಖರೆ ಉಪೇಂದ್ರ ಯಾದವ್ (ವಿಕೆಟ್ಕೀಪರ್) ಅಜಯ್ ಸಿಂಗ್ ಕುಕನಾ ಅಕ್ಷಯ್ ವಾಡಕರ್ (ವಿಕೆಟ್ಕೀಪರ್) ದೀಪಕ್ ಚಾಹರ್ ಕುಲದೀಪ್ ಸೇನ್ ಸಾರಾಂಶ್ ಜೈನ್.

ಪಂದ್ಯ ಆರಂಭ: ಬೆಳಿಗ್ಗೆ 9.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.