ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಪ್ರಯಾಣಿಕನೇ, ಕೈ ತೊಳೆದು ವಾಹನ ಏರು

ಕೋವಿಡ್‌–19 ಹರಡುವಿಕೆ ನಿಯಂತ್ರಣಕ್ಕೆ ಆಟೊ, ಕ್ಯಾಬ್ ಚಾಲಕರಿಂದ ವಿಭಿನ್ನ ಯತ್ನ
Last Updated 15 ಜುಲೈ 2020, 17:50 IST
ಅಕ್ಷರ ಗಾತ್ರ

ಯಳಂದೂರು:ತಾಲ್ಲೂಕಿನಲ್ಲಿ ಕೋವಿಡ್‌–19 ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಆಟೊ ಮತ್ತು ಕ್ಯಾಬ್ ಚಾಲಕರು ಸಹ ತಮ್ಮ ವಾಹನಗಳಸ್ವಚ್ಛತೆಗೆ ಒತ್ತು ನೀಡುತ್ತಿದ್ದಾರೆ. ಜತೆಗೆ ವಾಹನ ಏರುವ ಪ್ರಯಾಣಿಕರುಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುತ್ತಿದ್ದಾರೆ.

ಜನರು ಪಟ್ಟಣ ಇಲ್ಲವೇ ಇತರೆಡೆ ಪ್ರಯಾಣಿಸುವಾಗ ಮುಖಗವಸು ಧರಿಸಲುಹಿಂದೇಟು ಹಾಕುತ್ತಾರೆ. ಅನಕ್ಷರಸ್ಥರಿಗೆ ಇದರ ಬಗ್ಗೆ ಅರಿವಿಲ್ಲ. ಇದನ್ನು ಮನಗಂಡಚಾಲಕರು ವಾಹನ ಏರುವ ಮೊದಲು ಇವರ ಕೈಗೆ ಸ್ಯಾನಿಟೈಸರ್‌ ಹಾಡಿ, ಮಾಸ್ಕ್‌ತೊಡಿಸಿ, ನೀರಿನಿಂದ ಕೈತೊಳೆಸಿದ ನಂತರವೇ ವಾಹನ ಏರಿಸುತ್ತಾರೆ.

ಬಹುತೇಕ ಹಳ್ಳಿಗರು ಪಟ್ಟಣಗಳಿಗೆ ಬರಲು ಆಟೊ, ಮಿನಿ ಟೆಂಪೊ ನಂಬಿಕೊಂಡಿದ್ದಾರೆ.ನಾಲ್ಕು ತಿಂಗಳ ಹಿಂದೆ ಲಾಕ್‌ಡೌನ್ ಘೋಷಣೆ ಆಗಿದ್ದರಿಂದ ಮಾಲೀಕರು ರಿಕ್ಷಾಗಳನ್ನುಮನೆಗಳಲ್ಲಿ ನಿಲ್ಲಿಸಬೇಕಾಯಿತು.

‘ಅನ್‌ಲಾಕ್‌ ಬಳಿಕ ಆಟೊ ಓಡಿಸಲು ಅನುಮತಿ ಸಿಕ್ಕರೂಪ್ರಯಾಣಿಕರ ಸುಳಿವಿರಲಿಲ್ಲ. ಆದ್ದರಿಂದ ಹೆಚ್ಚುವರಿ ಖರ್ಚು ಮಾಡಿ ನೀರಿನ ಕ್ಯಾನ್‌,ಸ್ಯಾನಿಟೈಸರ್‌, ಮಾಸ್ಕ್‌ಗಳನ್ನು ಇಟ್ಟುಕೊಂಡೆ ಓಡಿಸಬೇಕಿದೆ’ ಎಂದು ಕ್ಯಾಬ್ಚಾಲಕ ಕೃಷ್ಣಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆಟೊ ಏರುವ ಮೊದಲು ಗ್ರಾಹಕರಿಗೆ ಸ್ಯಾನಿಟೈಸ್ ನೀಡಿ ಕೈ ಸ್ವಚ್ಛಗೊಳಿಸುತ್ತೇವೆ.ಮಾಸ್ಕ್ ಕಡ್ಡಾಯವಾಗಿ ಧರಿಸಲೇಬೇಕು. ನಂತರವಷ್ಟೇ ಆಟೊ ಹತ್ತಲು ಅವಕಾಶ ನೀಡುತ್ತೇವೆ ಎಂದು ಅವರು ಹೇಳಿದರು.

ಗ್ರಾಹಕರು ಕೆಮ್ಮಿದಾಗ, ಸೀನಿದಾಗ ಸೋಂಕು ತಗುಲುವ ಅಪಾಯ ಇರುತ್ತದೆ. ಹೀಗಾಗಿ, ರಿಕ್ಷಾಮತ್ತು ಕ್ಯಾಬ್‌ಗಳ ಸೇವೆಗೆ ಪ್ರಯಾಣಿಕರು ನೀಡುವ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟುಕೊಳ್ಳುತ್ತಾರೆ. ನಂತರ ಸ್ವಚ್ಚಗೊಳಿಸಿದ ಕೈಯಲ್ಲಿ ಮಾತ್ರ ಹಣದವಿನಿಮಯಕ್ಕೆ ಅವಕಾಶ ಇರುತ್ತದೆ.

ಮಾಸ್ಕ್‌ ಧರಿಸದವರಿಗೆ ಇಲ್ಲ ಅವಕಾಶ

‘ತಿಂಗಳಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆಗೆ ನೂರಾರು ರೂಪಾಯಿ ಖರ್ಚಾಗುತ್ತದೆ.ಅನ್ಯ ಜಿಲ್ಲೆಗಳ ಪ್ರಯಾಣಿಕರು ಪಟ್ಟಣಕ್ಕೆ ಬಂದಲ್ಲಿ ಅವರ ಓಡಾಟದ ವಿವರ ತಿಳಿದನಂತರವಷ್ಟೇ ವಾಹನ ಏರಲು ಅವಕಾಶ ಕಲ್ಪಿಸಲಾಗುತ್ತದೆ. ಮಾಸ್ಕ್ ಧರಿಸದ, ಸ್ಯಾನಿಟೈಸರ್ಬಳಸದ ಪ್ರಯಾಣಿಕರನ್ನು ವಾಹನದಲ್ಲಿ ಕುಳಿತುಕೊಳ್ಳಲು ಅವಕಾಶ ಇಲ್ಲ’ ಎಂದು ಸಂತೇಮರಹಳ್ಳಿಶ್ರೀನಿವಾಸ್ ಮೂರ್ತಿ ಹೇಳಿದರು.

‘ಕೊರೊನಾ ಜಾಗತಿಕವಾಗಿ ಹಬ್ಬುತ್ತಿದೆ. ಸೋಂಕಿನಿಂದ ಎಲ್ಲರಿಗೂ ರಕ್ಷಣೆ ಬೇಕಿದೆ.ಅದಕ್ಕಾಗಿ ಹೊಸತನ ಮತ್ತು ಸುರಕ್ಷತೆಗೆ ಒತ್ತು ನೀಡಿ ಆಟೊದಲ್ಲಿ ಕೆಲ ಮಾರ್ಪಾಡುಮಾಡಲಾಗಿದೆ. ಹೆಚ್ಚು ಖರ್ಚು ಬರುತ್ತಿದೆ. ಸಮುದಾಯಕ್ಕೆ ಸೋಂಕು ಹರಡದಂತೆತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ’ ಎಂದು ಹೇಳುತ್ತಾರೆ ಚಾಲಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT