ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಮದ್ದೂರು ವಲಯದಲ್ಲಿ ಗಂಡು ಹುಲಿ ಸಾವು

Published 24 ನವೆಂಬರ್ 2023, 12:57 IST
Last Updated 24 ನವೆಂಬರ್ 2023, 12:57 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗಂಡು ಹುಲಿಯೊಂದು ಶುಕ್ರವಾರ ಮೃತಪಟ್ಟಿದೆ.

ಮದ್ದೂರು ಕಾಲೊನಿಯ ಅರಣ್ಯ ಡಿ ಲೈನ್‌ ಹತ್ತಿರ ರೈತ ದೊಡ್ಡ ಕರಿಯಯ್ಯ ಎಂಬುವವರ ಜಮೀನಿನ ಬಳಿ ತೀವ್ರ ನಿತ್ರಾಣದಿಂದ ಮಲಗಿದ್ದ ಹುಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು.

ವಿಷಯ ತಿಳಿದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ, ಪಶು ವೈದ್ಯ ಡಾ.ಮಿರ್ಜಾ ವಾಸೀಂ, ಆರ್‌ಎಫ್‌ಒ ಮಲ್ಲೇಶ್‌ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಗಂಡು ಹುಲಿಯು ನಿಶ್ಯಕ್ತಿಯಿಂದ ನಿಲ್ಲಲಾರದ ಸ್ಥಿತಿಯಲ್ಲಿತ್ತು.

ಅತಿಯಾದ ಬಳಲಿಕೆಯಿಂದ ಸಂಜೆ 4 ಗಂಟೆಗೆ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಗಂಡು ಹುಲಿಗೆ ಮೂರು ವರ್ಷ ವಯಸ್ಸಾಗಿರಬಹುದು. ದೇಹದ ಮೇಲೆ ಗಾಯದ ಗುರುತುಗಳಿದ್ದು, ವನ್ಯಪ್ರಾಣಿಗಳೊಂದಿಗಿನ ಕಾದಾಟದಲ್ಲಿ ಗಾಯಗೊಂಡಿದೆ’ ಎಂದು ಎಸಿಎಫ್‌ ರವೀಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT