ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಗ್ಗಟ್ಟಿನ ಮಹಾಪ್ರಸಾದ ದುರುಪಯೋಗಕ್ಕೆ ಬಿಡುವುದಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯದಲ್ಲಿ ಪರ್ಯಾಯ ಶಕ್ತಿ ಪ್ರಯತ್ನಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ–ಶ್ರೀಗಳ ಹೇಳಿಕೆ
Last Updated 6 ಜುಲೈ 2021, 12:10 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೂಡಲಸಂಗಮ ಹಾಗು ಹರಿಹರ ಪಂಚಮಸಾಲಿ ಪೀಠಗಳಿಗೆ ಪರ್ಯಾಯವಾಗಿ ಮೂರನೇ ಶಕ್ತಿಯನ್ನು ನಿರ್ಮಾಣ ಮಾಡಲು ಹೊರಟವರು ಯಾರೆಂದು ನನಗೆ ಗೊತ್ತಿಲ್ಲ. ಈ ವಿಚಾರವೇ ನನಗೆ ತಿಳಿದಿಲ್ಲ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಮಂಗಳವಾರ ಹೇಳಿದರು.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಬನಗೂಳಿ ಮಠದಲ್ಲಿ ಸೋಮವಾರ ನಡೆದ 40ಕ್ಕೂ ಹೆಚ್ಚು ಮಠಾಧೀಶರು ಸಭೆಯ ಬಗ್ಗೆನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ತಾಲ್ಲೂಕಿಗೊಂದು ಮಠ ಕಟ್ಟಲು ಇವರು ಹೊರಟಿದ್ದಾರೆ. ನನಗೂ ಇದಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.

‘ಪಂಚಮಸಾಲಿಗಳಿಗೆ 2ಎ ಮೀಸಲಾತಿ ದೊರಕಿಸಿಕೊಡುವುದು ನನ್ನ ಗುರಿ.702 ಕಿ.ಮೀ ಪಾದಯಾತ್ರೆ ಮಾಡಿ ಪಂಚಮಶಾಲಿಗಳನ್ನು ಒಗ್ಗೂಡಿಸಿದ್ದೇನೆ.ಒಗ್ಗಟ್ಟಿನ ಮಹಾ ಅಡುಗೆ ಮಾಡಿದ್ದೇನೆ.ಇದರ ಲಾಭ ಪಂಚಮಶಾಲಿ ಕಟ್ಟಕಡೆಯ ಬಡ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ, ಶೋಷಿತ ರೈತರಿಗೆ ದೊರಕಬೇಕು.ಒಗ್ಗಟ್ಟಿನ ಮಹಾಪ್ರಸಾದ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ’ ಎಂದರು.

‘ಸಮಾಜದ ಹಿತ ಕಾಪಾಡುವುದು ನನ್ನ ಕೆಲಸ.ಒಳ್ಳೆ ಕೆಲಸಗಳು ನಡೆದಾಗ ಈ ರೀತಿಯ ಬೆಳವಣಿಗೆ ಆಗುತ್ತವೆ. ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದರು.

ರಾಜಕೀಯ ಪ್ರೇರಿತ: ಈ ಬೆಳವಣಿಗೆ ಸಂಬಂಧ ಪ್ರತಿಕ್ರಿಯಿಸಿರುವ ಬಸನಗೌಡ ಪಾಟೀಲ ಯತ್ನಾಳ ಅವರು, ‘ಇದು ರಾಜಕೀಯ ಪ್ರೇರಿತ. ಸಭೆ ಸೇರಿದ್ದವರು ವಿರಕ್ತ ಮಠದ ಸ್ವಾಮೀಜಿಗಳು ಪಂಚಮಸಾಲಿ ಪೀಠಾಧಿಪತಿಗಳಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT