ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಬೇಗೂರು ಮಾರಮ್ಮನ ಹಬ್ಬ ನಾಳೆ

Published 26 ಫೆಬ್ರುವರಿ 2024, 16:02 IST
Last Updated 26 ಫೆಬ್ರುವರಿ 2024, 16:02 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ ಫೆ.28ರಂದು ಬುಧವಾರ ಗ್ರಾಮದೇವತೆ ಮಾರಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಲಿದೆ. ಗ್ರಾಮದ ಎಲ್ಲಾ ಕೋಮಿನವರು ಒಗ್ಗೂಡಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಸಭೆ ನಡೆಸಿ ಗ್ರಾಮದೇವತೆ ಮಾರಮ್ಮನ ಹಬ್ಬ ಆಚರಿಸಲು ನಿರ್ಧರಿಸಲಾಯಿತು.

  ದೇವಾಲಯದ ಆವರಣದಲ್ಲಿ ವಿಶೇಷ ಹೋಮಗಳು ನಡೆಯಲಿದ್ದು, ಮಾರಮ್ಮನ ಮೂರ್ತಿಗೆ ವಿಶೇಷ ಅಭಿಷೇಕಗಳು ನಡೆಯಲಿವೆ. ನಂತರ ದೇವಿಯನ್ನು ವಿಶೇಷ ಹೂವಿನಿಂದ ಅಲಂಕರಿಸಿ ಗ್ರಾಮದ ಎಲ್ಲಾ ಕೋಮಿನವರು ಒಗ್ಗಟ್ಟಾಗಿ ರಾತ್ರಿಯಿಂದ ಬೆಳಗಿನವರೆಗೆ ಪೂಜೆ ಸಲ್ಲಿಸುವುದು ಎಂದು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT