ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಬಸ್ ಹತ್ತುವಾಗ ನೂಕು ನುಗ್ಗಲು, ಕಿತ್ತು ಬಂದ ಬಸ್ ಬಾಗಿಲು

Published : 30 ಜುಲೈ 2023, 5:28 IST
Last Updated : 30 ಜುಲೈ 2023, 5:28 IST
ಫಾಲೋ ಮಾಡಿ
Comments

ಯಳಂದೂರು: ಪಟ್ಟಣದ ಬಸ್ ನಿಲ್ದಾಣದಿಂದ ಶನಿವಾರ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಕೆಎಸ್ಆರ್ ಟಿಸಿ ಬಸ್‌‌ಗೆ ಪ್ರಯಾಣಿಕರು ಹತ್ತುವಾಗ ಬಾಗಿಲು ಕಿತ್ತು ಬಂತು.

ಶನಿವಾರ ಮೊಹರಂ ಕಡೇದಿನ ಹಾಗೂ ರಂಗನಾಥಸ್ವಾಮಿಗೆ ವಿಶೇಷ ದಿನ. ಅಪಾರ ಭಕ್ತರು ಹಾಗೂ ಪ್ರವಾಸಿಗರು ಬಸ್ ನಿಲ್ದಾಣದಲ್ಲಿ ನೆರೆದಿದ್ದರು. ಈ ವೇಳೆ ಬಸ್ ಬಾಗಿಲು ತೆರೆಯುವ ಸಂದರ್ಭ ಬಲ ಪ್ರಯೋಗ ಮಾಡಿದಾಗ ಬಾಗಿಲು ಕಿತ್ತು ಬಂದಿದೆ.

‘ಸರ್ಕಾರಿ ಬಸ್ ಬಾಗಿಲುಗಳು ನಾಮಕಾವಸ್ತೆಗೆ ಮಾತ್ರ ಇರುತ್ತವೆ. ಸರಿಯಾಗಿ ಲಾಕ್ ಆಗಲಾಗದು. ಒಮ್ಮೊಮ್ಮೆ ಬಾಗಿಲು ಹಾಕುವಾಗ ಮತ್ತು ತೆಗೆಯುವಾಗ ಸಮಸ್ಯೆಯಾಗುತ್ತದೆ. ನೂರಾರು ಜನರು ಪ್ರತಿ ಬಾರಿ ಇಳಿದು ಹತ್ತುವಾಗ ಕಿತ್ತು ಬರುವುದು ಸಾಮಾನ್ಯವಾಗಿದೆ’ ಎಂದು ಪ್ರವಾಸಿ ಮೈಸೂರು ನಂಜುಂಡ ಹೇಳಿದರು.

ಮಹಿಳೆಯರಿಂದ ಬಾಗಿಲು ಮುರಿದಿಲ್ಲ: ‘ಮಹಿಳೆಯರು ಬಸ್ ಹತ್ತುವಾಗ ಬಾಗಿಲು ಕಿತ್ತು ಬಂದಿಲ್ಲ. ನೂಕು ನುಗ್ಗಲು ಹೆಚ್ಚಾದಾಗ ಬಹಳಷ್ಟು ಪ್ರಯಾಣಿಕರು ಬಾಗಿಲನ್ನು ಆಸರೆಯಾಗಿ ಇಡಿಯುತ್ತಾರೆ. ಮಿತಿ ಮೀರಿದ ಜನರು ಇದ್ದಾಗ ಬಾಗಿಲಿಗೆ ಬಲ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ಬಾಗಿಲು ಕಿತ್ತು ಬರುತ್ತದೆ’ ಎಂದು ನಿರ್ವಾಹಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT