ಗೊಂದಲಗಳನ್ನು ಬಗೆಹರಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗಬೇಕು ಏಕಾಏಕಿ ಸಿಇಟಿ ತರಬೇತಿ ನಿಲ್ಲಿಸಿದರೆ ನಮ್ಮ ಭ್ವವಿಷ್ಯ ಹಾಳಾಗುತ್ತದೆ. ಶಾರದಾ ಅಕಾಡೆಮಿಯಿಂದ ತರಬೇತಿ ಮುಂದುವರಿಸಬೇಕು.
–ವಿದ್ಯಾರ್ಥಿನಿ
ಜೈಶ್ರೀರಾಮ್ ಘೋಷಣೆ
ಶಾರದಾ ಅಕಾಡೆಮಿಯ ಉಪನ್ಯಾಸಕರಿಂದಲೇ ಸಿಇಟಿ ತರಬೇತಿ ಮುಂದುವರಿಸಬೇಕು ಎಂದು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಘೋಷಣೆ ಕೂಗಿದರೆ ಪ್ರತಿಯಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಜೈಶ್ರೀರಾಮ್ ಘೋಷಣೆ ಕೂಗಿದರು. ಎರಡೂ ವಿಭಾಗಗಳ ವಿದ್ಯಾರ್ಥಿಗಳ ನಡುವೆ ಸಂಘರ್ಷಮಯ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತರಗತಿಗಳಿಗೆ ಕಳಿಸಿದರು.