ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಕ್ಷರ ಜಾತ್ರೆಗೆ ಸೋಮವಾರ ಚಾಲನೆ

Last Updated 14 ಫೆಬ್ರುವರಿ 2021, 13:44 IST
ಅಕ್ಷರ ಗಾತ್ರ

ಚಾಮರಾಜನಗರ: ಎರಡು ದಿನಗಳ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೋಮವಾರ ನಗರದಲ್ಲಿ ಚಾಲನೆ ಸಿಗಲಿದೆ. ಸಾಹಿತಿ ಮಂಜು ಕೋಡಿಉಗನೆ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದ ಮೂಲಕ ಅಕ್ಷರ ಜಾತ್ರೆ ಆರಂಭಗೊಳ್ಳಲಿದೆ. ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಅವಧಿಯಲ್ಲಿ ಸಾಧಕರಿಗೆ, ಕೊರೊನಾ ಯೋಧರಿಗೆ ಸನ್ಮಾನದ ಜೊತೆಗೆ ಕವಿಗೋಷ್ಠಿ, ವಿಚಾರಗೋಷ್ಠಿಗಳು ನಡೆಯಲಿವೆ.

ಮೊದಲ ದಿನದ ಕಾರ್ಯಕ್ರಮಗಳ ವಿವರ ಇಂತಿದೆ.

ಬೆಳಿಗ್ಗೆ 8.30: ಧ್ವಜಾರೋಹಣ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎಸ್‌.ವಿನಯ್‌ ಭಾಗಿ.

ಬೆಳಿಗ್ಗೆ 9.30: ಸಮ್ಮೇಳನಾಧ್ಯಕ್ಷರ ಮೆರವಣಿಗೆ. ಚಾಮರಾಜೇಶ್ವರ ದೇವಾಲಯದ ಎದುರಿನಿಂದ ಜೆ.ಎಚ್‌.ಪಟೇಲ್‌ ಸಭಾಂಗಣದವರೆಗೆ. ಉದ್ಘಾಟನೆ: ಜಿಲ್ಲಾ ಪಂಚಾಯಿತಿಯ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸದಾಶಿವ ಮೂರ್ತಿ. ಪುಷ್ಪಾರ್ಚನೆ: ಜಿ.ಪಂ. ಸಿಇಒ ಹರ್ಷಲ್‌ ಭೊಯರ್‌ ನಾರಾಯಣರಾವ್‌, ಅತಿಥಿಗಳು: ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ್‌.

ಬೆಳಿಗ್ಗೆ 10.30: ಉದ್ಘಾಟನಾ, ಪ್ರಶಸ್ತಿ ಪ್ರದಾನ ಸಮಾರಂಭ. ಉಪಸ್ಥಿತಿ: ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್, ಶಾಸಕ ಸಿ.ಪುಟ್ಟರಂಗಶೆಟ್ಟಿ, ಗಡಿ ಪ‍್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌, ಸಮ್ಮೇಳನಾಧ್ಯಕ್ಷ ಮಂಜು ಕೋಡಿಉಗನೆ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿ.ಚಾಮಶೆಟ್ಟಿ, ಮುದ್ದುಮಾದಪ್ಪ ದತ್ತಿ ಪ್ರಶಸ್ತಿ ಪುರಸ್ಕೃತ ಡಾ.ಎನ್‌.ಮಧುಸೂದನ್‌.ವಿಶೇಷ ಸಾಧಕರು ಹಾಗೂ ಕೊರೊನಾ ಯೋಧರಿಗೆ ಸನ್ಮಾನ.

ಮಧ್ಯಾಹ್ನ 2ರಿಂದ 3.30: ವಿಚಾರಗೋಷ್ಠಿ: ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ. ಅಧ್ಯಕ್ಷತೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್‌.ಎಸ್‌.ಪ್ರೇಮಲತಾ. ದಿಕ್ಸೂಚಿ ನುಡಿ: ಸಾಹಿತಿ ಡಾ.ಮಧುವನ ಶಂಕರ

ವಿಷಯ ಮಂಡನೆ: ಡಾ.ಹರದನಹಳ್ಳಿ ನಂಜುಂಡಸ್ವಾಮಿ (ವಿಷಯ: ಪ್ರಾಚೀನ ಸಾಹಿತ್ಯ), ನಾಟಕ ಭಾರ್ಗವ ಕೆಂಪರಾಜು (ವಿಷಯ: ಆಧುನಿಕ ಸಾಹಿತ್ಯ) ಮತ್ತು ಬಿ.ಗುರುರಾಜ್‌ (ವಿಷಯ: ದಲಿತ ಮತ್ತು ಮಹಿಳಾ ಸಾಹಿತ್ಯ).

ಮಧ್ಯಾಹ್ನ 3.30–5.30: ಕವಿಗೋಷ್ಠಿ. 40 ಕವಿಗಳಿಂದ ಸ್ವರಚಿತ ಕವನ ವಾಚನ. ಅಧ್ಯಕ್ಷತೆ: ಪ್ರೊ.ಡಿ.ದೊಡ್ಡಲಿಂಗೇಗೌಡ. ಆಶಯ ನುಡಿ: ಕವಿ ಸ್ವಾಮಿ ಪೊನ್ನಾಚಿ. ಉಪಸ್ಥಿತಿ: ಚಂದ್ರಶೇಖರ್‌.

ಸಂಜೆ.5.30: ವಿವಿಧ ಕ್ಷೇತ್ರಗಳ 30 ಸಾಧಕರಿಗೆ ಸನ್ಮಾನ. ಅಧ್ಯಕ್ಷತೆ: ತಾಳವಾಡಿಯ ಕನ್ನಡ ಹೋರಾಟಗಾರ ಎಸ್‌.ಚನ್ನಂಜಪ್ಪ, ಸನ್ಮಾನಿಸುವವರು: ಗಣೇಶ್‌ ದೀಕ್ಷಿತ್‌. ಅಭಿನಂದನಾ ನುಡಿ: ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ.

ಸಂಜೆ 6.30: ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ. ಅಧ್ಯಕ್ಷತೆ: ರಂಗಕರ್ಮಿ, ಸಾಹಿತಿ ಕೆ.ವೆಂಕಟರಾಜು. ಉದ್ಘಾಟನೆ: ತಹಶೀಲ್ದಾರ್‌ ಚಿದಾನಂದ ಗುರುಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT