ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ನೇರಳೆ ಹಣ್ಣಿನತ್ತ ಗ್ರಾಹಕರ ಆಕರ್ಷಣೆ

Published 6 ಜೂನ್ 2023, 4:28 IST
Last Updated 6 ಜೂನ್ 2023, 4:28 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಗೆ ನೇರಳೆ ಹಣ್ಣು ಕಾಲಿಟ್ಟಿದೆ. ತಳ್ಳುಗಾಡಿಗಳಲ್ಲಿ ರಾಶಿ ಹಾಕಿರುವ ಹುಳಿ ಸಿಹಿ ಮಿಶ್ರಿತ ನೇರಳೆ ಹಣ್ಣು ಗ್ರಾಹಕರನ್ನು ಅದರಲ್ಲೂ ಯುವಜನರನ್ನು ಹೆಚ್ಚು ಆಕರ್ಷಿಸುತ್ತಿದೆ. 

ಬೆಲೆಯೂ ದುಬಾರಿಯಾಗಿದೆ. ವ್ಯಾಪಾರಿಗಳು ಕೆಜಿಗೆ ₹200ವರೆಗೂ ಹೇಳುತ್ತಿದ್ದಾರೆ. ನೇರಳೆ ಹಣ್ಣಿನ ರುಚಿ ಸವಿಯುವುದಕ್ಕಾಗಿ ಜನರು ಕಾಲು ಕೆಜಿ, ಅರ್ಧ ಕೆಜಿಯಂತೆ ಖರೀದಿಸುತ್ತಿದ್ದಾರೆ. 

ವರ್ಷಕ್ಕೆ ಎರಡು ಮೂರು ತಿಂಗಳಷ್ಟೇ ಲಭ್ಯವಾಗುವ ನೇರಳೆ ಹಣ್ಣು ಮೇನಿಂದ ಜುಲೈ ತಿಂಗಳವರೆಗೂ ಮಾರುಕಟ್ಟೆಯಲ್ಲಿರುತ್ತದೆ. ಈ ಬಾರಿ ಬರುವಾಗ ಕೊಂಚ ತಡವಾಗಿದೆ.

‘ಸೀಸನ್‌ ಈಗಷ್ಟೇ ಆರಂಭವಾಗಿರುವುದರಿಂದ ಬೆಲೆ ಜಾಸ್ತಿ ಇದೆ. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಬಂದಾಗ ಬೆಲೆ ಇಳಿಯಲಿದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು. 

ಬೀನ್ಸ್‌, ಕ್ಯಾಪ್ಸಿಕಂ ತುಟ್ಟಿ:

ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ಕೆಲವು ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದೆ. 

ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್‌, ದಪ್ಪಮೆಣಸಿನಕಾಯಿ, ಗೆಟ್ಟೆಕೋಸುಗಳ ಧಾರಣೆ ಕೆಜಿಗೆ₹20ರಷ್ಟು ಹೆಚ್ಚಾಗಿದೆ. ಕಳೆದ ವಾರ ಈ ಮೂರೂ ತರಕಾರಿಗಳ ಬೆಲೆ ಕ್ರಮವಾಗಿ ₹40, ₹60 ಮತ್ತು ₹40 ಇತ್ತು.

ಕೆಲವು ವಾರಗಳಿಂದ ದುಬಾರಿಯಾಗಿದ್ದ ಶುಂಠಿಯ ಬೆಲೆಯಲ್ಲಿ ಇಳಿಕೆಯಾಗಿದೆ. ಕೆಜಿಗೆ ₹160ರಿಂದ ₹200ರೆವೆಗೂ ಬೆಲೆ ಇದೆ. 

ಟೊಮೆಟೊ (₹20), ಕ್ಯಾರೆಟ್‌ (₹40), ಆಲೂಗಡ್ಡೆ (₹30) ಈರುಳ್ಳಿ (₹20) ಸೇರಿದಂತೆ ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ಹಣ್ಣುಗಳ ಮಾರುಕಟ್ಟೆಯಲ್ಲಿ ದಾಳಿಂಬೆ ಬೆಲೆಯಲ್ಲಿ ಇಳಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಕಳೆದ ವಾರ ₹180 ಇತ್ತು. ಈವಾರ ₹160ಕ್ಕೆ ಇಳಿದಿದೆ. 

ಸೇಬು (₹180), ಕಿತ್ತಳೆ (₹160) ಮತ್ತು ದ್ರಾಕ್ಷಿ (₹120) ದುಬಾರಿ ಬೆಲೆ ಮುಂದುವರಿದಿದೆ. ಮಾವಿನ ಹಣ್ಣುಗಳಿಗೆ ಈ ವಾರವೂ ಬೇಡಿಕೆ ಇದೆ. ಧಾರಣೆಯಲ್ಲಿ ಬದಲಾವಣೆಯಾಗಿಲ್ಲ. 

ಕನಕಾಂಬರ ಅಗ್ಗ

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರ ಬಿಟ್ಟು ಉಳಿದ ಹೂವುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.  ಕನಕಾಂಬರಕ್ಕೆ ಬೇಡಿಕೆ ಕಡಿಮೆಯಾಗಿದ್ದು ಕೆಜಿಗೆ ₹600ರಂತೆ ಮಾರಾಟವಾಗುತ್ತಿದೆ. ಮಲ್ಲಿಗೆ ಸೇವಂತಿಗೆಗೆ ಬೇಡಿಕೆ ಇದ್ದು ಕೆಜಿಗೆ ಕ್ರಮವಾಗಿ ₹280 ಮತ್ತು ₹120ರಿಂದ ₹160ರವರೆಗೆ ಇದೆ.  ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಮಟನ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT