ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ನೀರಿನಲ್ಲಿ ವಿಹರಿಸುತ್ತಿರುವ ಹುಲಿ
ಮಲೆ ಮಹದೇಶ್ವರ ದೇವಸ್ಥಾನ
ಉದ್ಯೋಗ ಸೃಷ್ಟಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿಯಾಗುತ್ತವೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾದ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಬಲಗೊಳಿಸಬೇಕಿದೆ.
ಚೇತನ್ ಸತ್ತೇಗಾಲ
ಜಿಲ್ಲೆಯಲ್ಲಿ ಪ್ರಸಿದ್ಧ ಸ್ಥಳಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗದ ಕಾರಣ ಬಂದವರು ನಿರಾಶೆಯಿಂದ ಹಿಂದಿರುಗಬೇಕಾಗಿದೆ. ಸಾರಿಗೆ ವಸತಿ ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳು ದೊರೆಯಬೇಕು.
ಪ್ರಭುಸ್ವಾಮಿ ಎನ್.ದೊಡ್ಡಿoದುವಾಡಿ
ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಯಳಂದೂರು ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ವಿಸ್ತರಣೆಕ್ಕೆ ಬಹಳಷ್ಟು ಅವಕಾಶಗಳು ಇವೆ. ಚಿಕ್ಕತಿರುಪತಿ ಹೊಯ್ಸಳ ಕಲೆ ಮತ್ತು ವಾಸ್ತುಶಿಲ್ಪ ಬಿಂಬಿಸುವ ದೇಗುಲಗಳು ವಾರಾಹಸ್ವಾಮಿ ದೇಗುಲ ಜೈನರ ಕುರುಹು ವಸ್ತು ಸಂಗ್ರಹಾಲಯಗಳಿದ್ದು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯ ಮಾಡಿಕೊಡುವ ಕೆಲಸ ಮಾಡಬೇಕು.
ಸಂತೋಷ್. ಸುವರ್ಣ ತಿರುಮಲ ಟ್ರಸ್ಟ್ ಸದಸ್ಯ
ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರಚಾರ ಮಾಡುವ ಕಾರ್ಯ ಸಂಬಂಧಪಟ್ಟ ಇಲಾಖೆಯಿಂದ ನಡೆಯುತ್ತಿಲ್ಲ. ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟ ಹೊರತಾಗಿ ಇತರೆ ಸ್ಥಳಗಳು ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿವೆ.
ಅಬ್ದುಲ್ ಮಲಿಕ್ ಕರ್ನಾಟಕ ಕಾವಲು ಪಡೆ ತಾಲ್ಲೂಕು ಅಧ್ಯಕ್ಷ
‘ಶೀಘ್ರ ಚೇತರಿಕೆ’ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತು ಅನುದಾನ ಬಿಡುಗಡೆಯಾದರೆ ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ನೀಡಲಾಗುವುದು.
ತಮಣ ಗೌಡ ಪಾಟೀಲ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಆಯಕಟ್ಟಿನ ಸ್ಥಳಗಳಲ್ಲಿ ಫಲಕ ಬೇಕು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿರುವ ಎಲ್ಲ ಬಸ್ ಹಾಗೂ ರೈಲು ನಿಲ್ದಾಣ ಹೋಟೆಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪ್ರವಾಸಿತಾಣಗಳ ಮಾಹಿತಿ ಪ್ರದರ್ಶನ ಮಾಡಬೇಕು ನಿರ್ಧಿಷ್ಟ ಸ್ಥಳದಿಂದ ಇರುವ ಅಂತರ ಸಾರಿಗೆ ಹೋಟೆಲ್ ವಸತಿ ಸೌಲಭ್ಯ ಮಾಹಿತಿ ನೀಡಿದರೆ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಲಿದೆ.