ಚಾಮರಾಜನಗರ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿ ಉರಿಯದ ವಿದ್ಯುತ್ ದೀಪಗಳು
ಹನೂರು ಪಟ್ಟಣದಲ್ಲಿ ಕೆಶಿಪ್ ಯೋಜನೆಯಡಿ ನಿರ್ಮಾಣಮಾಡಿರುವ ರಸ್ತೆಯಲ್ಲಿ ವಿದ್ಯುತ್ ಕಂಬಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಸಮಸ್ಯೆಯಾಗಿದೆ
ಚಾಮರಾಜನಗರ ಸತ್ತಿರಸ್ತೆಯಲ್ಲಿ ಕತ್ತಲು ಆವರಿಸಿರುವುದು

ರಸ್ತೆ ಮಧ್ಯೆದಲ್ಲಿ ಅಳವಡಿಸಿರುವ ಕಂಬಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದರ ಮೂಲಕ ಅಪಾಯಗಳನ್ನು ತಪ್ಪಿಸಬೇಕು.
–ಯೋಗೇಶ್, ಕಾಮಗೆರೆ
ಸೋಮವಾರಪೇಟೆಯಿಂದ ಸಂತೇಮರಹಳ್ಳಿವೃತ್ತದವರೆಗೆ ಬೀದಿದೀಪಗಳ ಅಳವಡಿಕೆಗೆ ಸ್ಥಳೀಯ ಶಾಸಕರ ನಿಧಿಯಿಂದ ₹ 40 ಲಕ್ಷ ಟೆಂಡರ್ ಆಗಿದ್ದು ಶೀಘ್ರ ಬೀದಿದೀಪಗಳ ಅಳವಡಿಕೆ ಆರಂಭವಾಗಲಿದೆ. ಜೋಡಿ ರಸ್ತೆಗೆ ಕಳೆದ ದಸರಾದಲ್ಲಿ ಬಲ್ಬ್‌ಗಳನ್ನು ಹಾಕಲಾಗಿತ್ತು. ದುರಸ್ತಿಯಲ್ಲಿರುವ ಬೀದಿದೀಪಗಳನ್ನು ಬದಲಾಯಿಸಲಾಗುವುದು.
–ಸುರೇಶ್, ನಗರಸಭೆ ಅಧ್ಯಕ್ಷ 
ಕತ್ತಲಿನಲ್ಲಿ ಸಂಚಾರ ಸಂತೇಮರಹಳ್ಳಿಯಿಂದ ದೇಶವಳ್ಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಕತ್ತಲೆಯಲ್ಲಿ ಸಾರ್ವಜನಿಕರು ತಿರುಗಾಡಬೇಕಾಗಿದೆ. ಮುಖ್ಯ ರಸ್ತೆಯಲ್ಲಿ ಕಂಬಗಳು ಮಾತ್ರ ಇದ್ದು ಬಲ್ಪ್‌ಗಳನ್ನು ಅಳವಡಿಸಿಲ್ಲ.
–ಶ್ರೀನಿವಾಸ್, ದೇಶವಳ್ಳಿ ನಿವಾಸಿ
ಅವೈಜ್ಞಾನಿಕವಾಗಿ ಬೀದಿದೀಪ ಅಳವಡಿಕೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಬೀದಿ ದೀಪಗಳನ್ನು ಅಳವಡಿಸಿರುವುದರಿಂದ ರಸ್ತೆಗೆ ಸಮರ್ಪಕ ಬೆಳಕು ಬೀಳುತ್ತಿಲ್ಲ. ನೆಪಮಾತ್ರಕ್ಕೆ ಬೀದಿದೀಪಗಳು ಎಂಬಂತಾಗಿದೆ. ಕೆಲವು ಬಡಾವಣೆಯಗಳಲ್ಲಂತೂ ಬೀದಿ ದೀಪ ಕನಸಿನ ಮಾತಾಗದಿಎ. ಸಮಸ್ಯೆ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ ಅನುದಾನವಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.
–ಭಾನುಪ್ರಕಾಶ್, ಸಾಮಾಜಿಕ ಹೋರಾಟಗಾರ