ನೀರೆತ್ತುವ ಪಂಪ್‌ಹೌಸ್‌ನಲ್ಲಿರುವ ಮೋಟಾರ್ ತೀರಾ ಹಳೆಯದಾಗಿರುವುದರಿಂದ ಪದೇಪದೇ ದುರಸ್ತಿಗೆ ಬರುತ್ತಿದೆ. ಸಮಸ್ಯೆಗೆ ಪರಿಹಾರವಾಗಿ ಅಮೃತ್ 2 ಯೋಜನೆಯಡಿ 750 ಎಚ್‌ಪಿ ಸಾಮರ್ಥ್ಯದ 2 ಮೋಟಾರ್‌ಗಳನ್ನು ತರಿಸಲಾಗಿದ್ದು ಶೀಘ್ರ ಅಳವಡಿಕೆ ಮಾಡಲಾಗುವುದು. ಮಂಗಳವಾರ ಮೋಟಾರ್ ದುರಸ್ತಿಗೊಳಿಸಲಾಗಿದ್ದು ಬುಧವಾರ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಸುರೇಶ್ ತಿಳಿಸಿದರು.
ಭಾನುಪ್ರಕಾಶ್ ಸಾಮಾಜಿಕ ಹೋರಾಟಗಾರ
ಪದೇಪದೇ ದುರಸ್ತಿಗೆ ಬರುತ್ತಿರುವ ನೀರೆತ್ತುವ ಮೋಟಾರ್ ಅನ್ನು ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಳಿಸಿ ನಗರದ ಜನಸಾಮಾನ್ಯರ ನೋವು ಎಲ್ಲರಿಗೂ ತಿಳಿಯುವಂತೆ ಮಾಡಬೇಕು
ಭಾನುಪ್ರಕಾಶ್ ಸಾಮಾಜಿಕ ಕಾರ್ಯಕರ್ತ
ಮಾಹಿತಿ ಕೊಡದ ಲೆಕ್ಕಪತ್ರ ಶಾಖೆ’
- ‘ಪಂಪ್‌ಪೌಸ್‌ನ ಮೋಟಾರ್ ದುರಸ್ತಿಗೆ ಇದುವರೆಗೂ ನಗರಸಭೆ ವ್ಯಯಿಸಿರುವ ವೆಚ್ಚದ ಮಾಹಿತಿಯನ್ನು ನಗರಸಭೆಯ ಲೆಕ್ಕಶಾಖೆಯ ಅಧಿಕಾರಿಗಳು ಬಹಿರಂಗಗೊಳಿಸುತ್ತಿಲ್ಲ. ಮೋಟಾರ್ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿರುವ ಶಂಕೆ ಇದ್ದು ತನಿಖೆ ನಡೆಸಬೇಕು. ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗದಂತೆ ತಡೆಯೊಡ್ಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.