ಚಾಮರಾಜನಗರ: ಚಾಮರಾಜನಗರ–ಟಿ.ನರಸೀಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮಸಗಾಪುರದಲ್ಲಿ ಚಾಮರಾಜನಗರ–ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಚೂಡಾ) ನಿರ್ಮಾಣ ಮಾಡುತ್ತಿರುವ ಬಡಾವಣೆಯಲ್ಲಿ ನಿವೇಶನ ಖರೀದಿಸಲು ಸಾರ್ವಜನಿಕರು ಉತ್ಸಾಹ ತೋರುತ್ತಿದ್ದಾರೆ.

ಜ.16ರಿಂದ ನಿವೇಶನಕ್ಕೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದ್ದು ಇದುವರೆಗೂ 100ಕ್ಕೂ ಹೆಚ್ಚು ಮಂದಿ ಅರ್ಜಿ ಸ್ವೀಕಾರ ಮಾಡಿದ್ದಾರೆ. ಚುಡಾ ನಿವೇಶನ ಖರೀದಿಗೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಅರ್ಜಿ ಸಲ್ಲಿಕೆ ಅವಧಿ (ಫೆ.28) ಮುಗಿಯುವ ಹೊತ್ತಿಗೆ ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗುವ ವಿಶ್ವಾಸವಿದೆ ಎನ್ನುತ್ತಾರೆ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನ).

ನಿವೇಶನ ಖರೀದಿಸಲು ಅರ್ಜಿ ಸಲ್ಲಿಕೆ ವಿಧಾನ, ದರ, ಅಳತೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮಾಹಿತಿ ಪಡೆಯಲು ಪ್ರತಿದಿನ ಚುಡಾ ಕಚೇರಿಗೆ ಸಾರ್ವಜನಿಕರು ಭೇಟಿ ನೀಡುತ್ತಿದ್ದಾರೆ. ಹಲವರು ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ 13 ದಿನಗಳಲ್ಲಿ ಉತ್ತಮ ಸ್ಪಂದನೆ ದೊರೆತಿದೆ ಎನ್ನುತ್ತಾರೆ ಅವರು.

ಬೇಡಿಕೆ ಏಕೆ:

ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಧಿಕೃತ ಒಪ್ಪಿಗೆ ಪಡೆದು ರಸ್ತೆ, ಒಳಚರಂಡಿ, ಬೀದಿದೀಪ, ಕುಡಿಯುವ ನೀರಿನ ಸೌಲಭ್ಯ, ಉದ್ಯಾನ, ಸಮುದಾಯ ಭವನ ಸಹಿತ ನಾಗರಿಕರ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡುವುದರಿಂದ ನಿವೇಶನಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಚುಡಾ ನಿವೇಶನಗಳು ಭೂವ್ಯಾಜ್ಯಗಳಿಂದ ಮುಕ್ತವಾಗಿರುವುದು ಕೂಡ ನಾಗರಿಕರು ಖರೀದಿಗೆ ಹೆಚ್ಚು ಆಸಕ್ತಿ ತೋರಲು ಕಾರಣ ಎನ್ನುತ್ತಾರೆ ಚುಡಾ ಆಯುಕ್ತೆ ಎಚ್.ವಿ.ಸೀಮಾ.

ಎಷ್ಟು ನಿವೇಶನಗಳು ಲಭ್ಯ:

ಮಸಗಾಪುರ ಗ್ರಾಮದಲ್ಲಿ 14 ಎಕರೆ 24 ಗುಂಟೆ ಜಮೀನಿನಲ್ಲಿ ಖಾಸಗಿ ಹಾಗೂ ಚುಡಾ ಸಹಭಾಗಿತ್ವದಲ್ಲಿ (ಪಿಪಿಪಿ) ಬಡಾವಣೆ ನಿರ್ಮಾಣವಾಗಲಿದ್ದು ಚುಡಾ ಪಾಲಿಗೆ ಲಭ್ಯವಾಗುವ ಶೇ 50ರಷ್ಟು ನಿವೇಶನಗಳು ಸಾರ್ವಜನಿಕರಿಗೆ ಹಂಚಿಕೆಗೆ ಲಭ್ಯವಾಗಲಿವೆ. ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮ 1991, ನಿಯಮ 13 (2)ರ ಅನ್ವಯ ವಿವಿವ ಪ್ರರ್ಗಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ.

14.24 ಎಕರೆಯಲ್ಲಿ ಶೇ 45.14ರಷ್ಟು ಅಂದರೆ 26,669 ಚದರ ಮೀಟರ್ ಜಾಗವನ್ನು ವಸತಿ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದ್ದು, ವಾಣಿಜ್ಯ ನಿವೇಶನಗಳ ರಚನೆಗೆ 1207.33 ಚ.ಮೀ, ಉದ್ಯಾನ, ಬಯಲುಜಾಗ, ಬಫರ್ ವಲಯಕ್ಕೆ 8,845 ಚ.ಮೀ, ನಾಗರಿಕ ಸೌಲಭ್ಯಗಳಿಗೆ 5,945 ಚ.ಮೀ, ರಸ್ತೆ ನಿರ್ಮಾಣಕ್ಕೆ 16,416 ಚ. ಮೀ ಬಳಕೆಯಾಗಲಿದೆ.

6 ಮೀ x 3ಮೀ ಅಳತೆಯ 72 ನಿವೇಶನ, 9 ಮೀ x 15 ಮೀ ಅಳತೆಯ 88, 12 ಮೀ x 18 ಮೀ ಅಳತೆಯ 26, ಅನಿಯತ ಅಳತೆಯ 14, ವಾಣಿಜ್ಯ ಬಳಕೆಯ 7 ನಿವೇಶನಗಳು ಸೇರಿ 236 ನಿವೇಶನಗಳು ನಿರ್ಮಾಣವಾಗಲಿದ್ದು ಇವುಗಳಲ್ಲಿ ಶೇ 50ರಷ್ಟು ಸಾರ್ವಜನಿಕರಿಗೆ ಹಂಚಿಕೆಯಾಗಲಿದ್ದು ಉಳಿದ ಶೇ 50ರಷ್ಟು ನಿವೇಶನಗಳು ಭೂ ಮಾಲೀಕರಿಗೆ ಸಿಗಲಿವೆ.

ದರ ಎಷ್ಟು:

ಸಾರ್ವಜನಿಕರು 6 ಮೀ x 8.3 ಮೀ ಅಳತೆಯ ನಿವೇಶನಕ್ಕೆ 6,69,810, 9 ಮೀ x 15 ಮೀ ಅಳತೆಯ ನಿವೇಶನಕ್ಕೆ 18,15,750 ಹಾಗೂ 12 ಮೀ x 18 ಮೀ ಅಳತೆಯ ನಿವೇಶನಕ್ಕೆ 29,05,200 ಪಾವತಿಸಬೇಕು. ಅರ್ಜಿ ಸಲ್ಲಿಸುವಾಗ ನಿವೇಶನದ ಒಟ್ಟು ಮೌಲ್ಯದಲ್ಲಿ ಶೇ 10ರಷ್ಟು, ನಿವೇಶನ ಹಂಚಿಕೆಯಾದ ಬಳಿಕ ಉಳಿದ ಶೇ 90ರಷ್ಟು ಹಣ ಪಾವತಿಸಬೇಕು ಎನ್ನುತ್ತಾರೆ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ.

ಚುಡಾ ನಿವೇಶನ ಖರೀದಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನ ದೊರೆತಿದೆ ಫೆ.28ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು ಸದುಪಯೋಗಪಡಿಸಿಕೊಳ್ಳಬೇಕು.
–ಎಚ್.ವಿ.ಸೀಮಾ ಚುಡಾ ಆಯುಕ್ತೆ

ಮೊದಲ ಪ್ರಯತ್ನದ ಯಶಸ್ಸು ನೋಡಿಕೊಂಡು ಮುಂದೆ ಬಡಾವಣೆಗಳ ನಿರ್ಮಾಣಕ್ಕೆ ಚುಡಾ ಮುಂದಾಗಲಿದೆ. ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವುದು ಚುಡಾ ಆದ್ಯತೆ
–ಮಹಮ್ಮದ್ ಅಸ್ಗರ್ ಮುನ್ನ ಚುಡಾ ಅಧ್ಯಕ್ಷ

14 ಎಕರೆ 24 ಗುಂಟೆಯಲ್ಲಿ ವಸತಿ ಬಡಾವಣೆ

–ವಿವಿಧ ಅಳತೆಯ 236 ನಿವೇಶನಗಳ ನಿರ್ಮಾಣ

–ಪ್ರತಿ ಚ.ಮೀಗೆ 13450 ದರ ನಿಗದಿ

–ಚಾಮರಾಜನಗರದ ಇಂಡಿಯನ್ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಕೆ

–ಫೆ.28 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.