ಬುಧವಾರ, ಜನವರಿ 27, 2021
27 °C

ಚಾಮರಾಜನಗರ ಜಿಲ್ಲೆಯಲ್ಲಿ ಸರಳ ಈದ್‌ ಮಿಲಾದ್‌ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪ್ರವಾದಿ ಮಹಮ್ಮದ್‌ ಅವರ ಜನ್ಮದಿನದ ಅಂಗವಾಗಿ ಜಿಲ್ಲೆಯಲ್ಲಿ ಮುಸ್ಲಿಮರು ಶುಕ್ರವಾರ ಈದ್ ಮಿಲಾದ್‌ ಹಬ್ಬವನ್ನು ಸರಳವಾಗಿ ಆಚರಿಸಿದರು. ‌‌ಈ ವರ್ಷ ಕೋವಿಡ್‌ ಕಾರಣದಿಂದ ‌ಅದ್ಧೂರಿ ಆಚರಣೆ ಇರಲಿಲ್ಲ. 

ಮಸೀದಿ, ದರ್ಗಾ ಹಾಗೂ ಇನ್ನಿತರ ವಕ್ಫ್ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದೆ ಸರಳವಾಗಿ ಆಚರಿಸುವಂತೆ ವಕ್ಫ್‌ ಇಲಾಖೆ ಸೂಚಿಸಿತ್ತು. ‌

ಹಬ್ಬದ ಪ್ರಯುಕ್ತ ನಡೆಸಲಾಗುತ್ತಿದ್ದ ಸಾಮೂಹಿಕ ಮೆರವಣಿಗೆ, ಸಭೆ-ಸಮಾರಂಭಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು, ಡಿಜಿಟಲ್ ಸೌಂಡ್ ಸಿಸ್ಟಮ್ ಬಳಕೆಯನ್ನೂ ಜಿಲ್ಲಾಡಳಿತ ನಿಷೇಧಿಸಿತ್ತು. 

ಆದ್ದರಿಂದ ಈ ಬಾರಿಯ ಆಚರಣೆ ಮಸೀದಿಗಳಿಗೆ ಮಾತ್ರ ಸೀಮಿತವಾಗಿತ್ತು. ಹಬ್ಬದ ಅಂಗವಾಗಿ ಪುರುಷರು ಮಸೀದಿಗಳಲ್ಲಿ ಪ್ರಾರ್ಥನೆ ನಡೆಸಿದರೆ, ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಮನೆಗಳಲ್ಲಿ ಪ್ರಾರ್ಥನೆ, ಕುರ್‌ ಅನ್‌ ಪಠಿಸಿದರು. ‌

ಮಸೀದಿಗಳಲ್ಲಿ ಧರ್ಮಗುರುಗಳು ಪ್ರವಚನ ನಡೆಸಿಕೊಟ್ಟರು. ಪ್ರವಾದಿ ಅವರ ಜೀವನ ಸಂದೇಶಗಳನ್ನು ವಿವರಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.