ಸೋಮವಾರ, ಮೇ 17, 2021
21 °C

ಕಬ್ಬಿನ ಗದ್ದೆಗೆ ಹಾಕಿದ ಬೆಂಕಿಗೆ ಸಿಲುಕಿ ರೈತ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿದ್ದ ತರಗಿಗೆ ತಾವೇ ಹಾಕಿದ ಬೆಂಕಿಯಿಂದಾಗಿ ರೈತರೊಬ್ಬರು ತಾಲ್ಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಗುರುವಾರ ಮೃತಪಟ್ಟಿದ್ದಾರೆ. 

ಗ್ರಾಮದ ನಿವಾಸಿ ವೆಂಕಟರಂಗೇಗೌಡ (75) ಮೃತಪಟ್ಟವರು. ತಮಗೆ ಸೇರಿದ ಸರ್ವೆ ನಂ 60/2 ರ 27 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಗುತ್ತಿಗೆ ಆಧಾರದಲ್ಲಿ ಮಾರಾಟ ಮಾಡಿದ್ದರು. ಗುತ್ತಿಗೆ ಪಡೆದಿದ್ದವರು ಕಟಾವು ಮಾಡಿದ್ದರು. ವೆಂಕಟರಂಗೇಗೌಡ ಅವರು ಗುರುವಾರ ಮಧ್ಯಾಹ್ನ ಜಮೀನಿನಲ್ಲಿದ್ದ ಕಬ್ಬಿನ ತರಗಿಗೆ ಬೆಂಕಿ ಹಾಕಿದ್ದಾರೆ. 

ಬೆಂಕಿಯು ಪಕ್ಕದ ಜಮೀನಿನಲ್ಲಿ ಬೆಳದಿದ್ದ ಸಸಿ ಕಬ್ಬಿಗೆ ತಗುಲಿತು ಎನ್ನಲಾಗಿದೆ. ಇದನ್ನು ನಂದಿಸುವ ಪ್ರಯತ್ನದಲ್ಲಿ ವೆಂಕಟರಂಗೇಗೌಡ ಅವರು ಕೆಳಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಬೆಂಕಿಯ ಶಾಖ ಹಾಗೂ ಹೊಗೆಯಿಂದಾಗಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ. 

‘ಬೆಂಕಿ ತಗುಲಿ ಮೃತಪಟ್ಟಿದ್ದಾರೆ ಎಂದು ರೈತನ ಮನೆಯವರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದೇವೆ. ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ’ ಎಂದು ಚಾಮರಾಜನಗರ ಪೂರ್ವ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಆನಂದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು