ಗುರುವಾರ , ಆಗಸ್ಟ್ 11, 2022
24 °C

ಪ್ರಿಯಕರನೊಂದಿಗೆ ವಿವಾಹಕ್ಕೆ ವಿರೋಧ: ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನೂರು: ಪ್ರೀತಿಸಿ ವಿವಾಹವಾಗಲು ಸಿದ್ಧತೆ ನಡೆಸಿಕೊಂಡಿದ್ದ ಪ್ರೇಮಿಗಳಿಬ್ಬರ ಮೇಲೆ ಯುವತಿಯ ತಂದೆ ಮತ್ತು ಸಹೋದರ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಧನಲಕ್ಷ್ಮಿ (24) ಮತ್ತು ಸತ್ಯ(28) ಹಲ್ಲೇಗೀಡಾದವರು. ಇಬ್ಬರೂ ಒಂದೇ ಗ್ರಾಮದವರಾಗಿದ್ದು, 2 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಹಲ್ಲೆಗೊಳಗಾದ ಸತ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ. ಅ.30ರಂದು ದೇವಸ್ಥಾನಕ್ಕೆ ಹೋಗಿಬರುವುದಾಗಿ ಮನೆಯಲ್ಲಿ ತಿಳಿಸಿದ್ದ ಧನಲಕ್ಷ್ಮಿ ಸತ್ಯನ ಜೊತೆ ತೆರಳಿದ್ದಳು. ನ.10ರಂದು ಗ್ರಾಮಕ್ಕೆ ಹಿಂದಿರುಗಿ ಮತ್ತೆ ಸತ್ಯನ ಮನೆಯಲ್ಲೇ ವಾಸವಾಗಿದ್ದಳು.

ಡಿ.7ರಂದು ಮದುವೆ ಮಾಡಿಸುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದರು. ಶುಕ್ರವಾರ ಸಿದ್ಧತೆಯೂ ಆರಂಭವಾಗಿತ್ತು. ಸಂಜೆ 6 ಗಂಟೆ ವೇಳೆಗೆ
ಮೆಡಿಕಲ್ ಸ್ಟೋರ್ ಬಳಿ ಬಂದಾಗ ಯುವತಿಯ ತಂದೆ ಶಿವಸ್ವಾಮಿ ಮತ್ತು ಸಹೋದರ ಮಹೇಂದ್ರ ‘ಈಗ ನಿಶ್ಚಯ ಮಾಡಿರುವ ಹುಡುಗ ಪೋಲಿಯಾಗಿದ್ದು,
ಆತನ ಜೊತೆ ವಿವಾಹವಾಗುವುದು ಬೇಡ. ನಾವು ನಿನಗೆ ಬೇರೆ ವರನನ್ನು ನೋಡಿ ವಿವಾಹ ಮಾಡುತ್ತೇವೆ’ ಎಂದು
ಧನಲಕ್ಷ್ಮಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

ಈ ವೇಳೆ ಕುಪಿತಗೊಂಡ ಶಿವಸ್ವಾಮಿ ಮತ್ತು ಮಹೇಂದ್ರ ಮಚ್ಚಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಬಲವಾದ ಪೆಟ್ಟುಬಿದ್ದಿದೆ. ಸ್ಥಳದಲ್ಲಿದ್ದ ಸತ್ಯನನ್ನೂ ತಳ್ಳಾಡಿದ್ದು ಆತನಿಗೂ ಗಾಯಗಳಾಗಿವೆ.

ಇಬ್ಬರೂ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಹನೂರು ಪೊಲೀಸರಿಗೆ ಹೇಳಿಕೆ ನೀಡಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು