ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕೊಡದಿದ್ದರೆ ಬಂದೂಕಿನಿಂದ ಸುಟ್ಟು ಹಾಕುವೆ: ವಿಡಿಯೊ ವೈರಲ್

ಪಾಲಾರ್‌ ಚೆಕ್‌ಪೋಸ್ಟ್‌ನಲ್ಲಿ ಘಟನೆ: ಲಾರಿ ಚಾಲಕ, ಕ್ಲೀನರ್‌ಗೆ ಸಿಬ್ಬಂದಿ ಬೆದರಿಕೆ
Last Updated 16 ಆಗಸ್ಟ್ 2022, 16:33 IST
ಅಕ್ಷರ ಗಾತ್ರ

ಹನೂರು: ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಸಿಬ್ಬಂದಿಯೊಬ್ಬರು ಕುಡಿದ ಮತ್ತಿನಲ್ಲಿ ಕೇಳಿದಷ್ಟು ಹಣ ನೀಡದಿದ್ದಲ್ಲಿ ಬಂದೂಕಿನಿಂದ ಸುಟ್ಟು ಹಾಕುವುದಾಗಿ ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಬೆದರಿಕೆ ಹಾಕಿರುವ ವಿಡಿಯೊ ವೈರಲ್ ಆಗಿದೆ.

ಕರ್ನಾಟಕ – ತಮಿಳುನಾಡು ಗಡಿಭಾಗದ ಪಾಲಾರ್ ಚೆಕ್‌ಪೋಸ್ಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯಾವಾಗ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಕುಡಿದ ಮತ್ತಿನಲ್ಲಿ ಅರಣ್ಯ ರಕ್ಷಕ ಮೋಹನ್, ಚೆಕ್‍ಪೋಸ್ಟ್ ಬಳಿ ಬಂದ ಲಾರಿಯೊಂದರ ಚಾಲಕ ಮತ್ತು ಕ್ಲೀನರ್ ಜೊತೆ ಹಣದ ವಿಚಾರವಾಗಿ ಸಂಭಾಷಣೆ ಮಾಡುವ ದೃಶ್ಯಾವಳಿ ತುಣುಕಿನಲ್ಲಿದೆ.

ಚೆಕ್‌ಪೋಸ್ಟ್‌ನಲ್ಲಿ ನಿಯೋಜನೆಗೊಂಡಿದ್ದ ಸಿಬ್ಬಂದಿ ಲಾರಿಯ ಚಾಲಕ ಮತ್ತು ಕ್ಲೀನರ್ ಬಳಿ ಹಣ ಕೇಳಿದ್ದಾರೆ. ಈ ವೇಳೆ ಲಾರಿಯ ಚಾಲಕ, ‘ಈಗಾಗಲೇ ₹30 ನೀಡಿದ್ದೇವಲ್ಲ’ ಎಂದು ಹೇಳುತ್ತಾರೆ. ಇದರಿಂದ ಕೋಪಗೊಳ್ಳುವ ಮೋಹನ್, ಲಾರಿಯ ಕ್ಲೀನರ್‌ ಅವರನ್ನು ‘ನಿನ್ನ ಹೆಸರು ಏನು’ ಎಂದು ಕೇಳುತ್ತಾರೆ. ಹೆಸರು ಹೇಳಿದಾಗ ‘ನೀವು ಬಗ್ಗುವುದಿಲ್ಲವೇ? ಮುತ್ತಯ್ಯ ಅವರು ಇದ್ದರೆ ಬಗ್ಗುತ್ತೀರಾ’ ಎಂದು ಮರು ಪ್ರಶ್ನಿಸಿದ್ದಾರೆ. ‘ಏನು ಮಾಡಿಕೊಳ್ಳಲು ಆಗುವುದಿಲ್ಲ ಅಂತ ನೀವು ಹೇಳಿ. ನಾಳೆ ನಾನು ಮಾಡದಿದ್ದರೆ, ನಾನು ಅಪ್ಪನಿಗೆ ಹುಟ್ಟಿದವನೇ ಅಲ್ಲ. ಎತ್ತಿಕೊಂಡು ಬನ್ನಿ ಬಂದೂಕನ್ನು ಸುಟ್ಟು ಹಾಕಿಬಿಡುತ್ತೇನೆ’ ಎಂದು ಹೇಳುವ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT