ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಜಮಾನರ ಆಶೀರ್ವಾದಕ್ಕೆ ಕಾದಿರುವ ಉಮೇದುವಾರ‌; ನಾಮಪತ್ರ ಸಲ್ಲಿಸಲು ತಂತ್ರಗಾರಿಕೆ

ಯಳಂದೂರು: ಪುಟ್ಟ ತಾಲ್ಲೂಕಿನಲ್ಲಿ ಬಿರುಸು ಪಡೆದ ಹಳ್ಳಿ ರಾಜಕೀಯ
Last Updated 13 ಡಿಸೆಂಬರ್ 2020, 16:17 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಯ ಚುನಾವಣಾ ಪ್ರಕ್ರಿಯೆ ಚುರುಕುಗೊಂಡಿದೆ. ಗ್ರಾಮಗಳಲ್ಲಿ ಸದಸ್ಯತ್ವ ಸ್ಥಾನಕ್ಕೆ ಇತರರು ಸ್ಪರ್ಧಿಸದಂತೆ ಒಳ ಒಪ್ಪಂದ ಮಾಡಿಕೊಳ್ಳುವ ಕುಳಗಳುಸಕ್ರಿಯರಾಗಿದ್ದಾರೆ.

ಕುಲದಲ್ಲಿ ಯಜಮಾನರ ಆಶೀರ್ವಾದ ಸಿಕ್ಕರೆ ಮಾತ್ರ ಆಕಾಂಕ್ಷಿಗಳುನಾಮಪತ್ರ ಸಲ್ಲಿಸುವ ಇರಾದೆ ವ್ಯಕ್ತಪಡಿಸುತ್ತಿದ್ದಾರೆ ಎನ್ನುವ ಆರೋಪವ್ಯಾಪಕವಾಗಿ ಕೇಳಿಬರುತ್ತಿದೆ. ನಿಜವಾಗಿ ಅಭ್ಯರ್ಥಿಗಳು ಆವಿರೋಧ ಆಯ್ಕೆಯಾದರೂ, ಅವರನ್ನುಸಂಶಯದಿಂದ ನೋಡುವಂತೆ ಆಗಿದೆ. ಒಳ ಒಪ್ಪಂದಗಳ ನಂತರವೇ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ನಡೆಸಬೇಕು ಎನ್ನುವ ಪರಿಸ್ಥಿತಿ ತಾಲ್ಲೂಕಿನ ಅಲ್ಲಲ್ಲಿ ಕಂಡು ಬರುತ್ತಿದೆ.

ಸ್ಥಳೀಯ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿಗೆ ಈಗ ಹೆಚ್ಚಿನ ಆರ್ಥಿಕ ಬಲ ಬಂದಿದೆ.ಸಂಪನ್ಮೂಲಗಳ ಸಂಗ್ರಹ, ಕರ ವಸೂಲಾತಿ, ನರೇಗಾ ಕಾಮಗಾರಿ ಮತ್ತಿತರ ವಿಷಯಗಳಲ್ಲಿಪಂಚಾಯಿತಿಗೆ ಹೆಚ್ಚಿನ ಅಧಿಕಾರ ಇದೆ. ವಸತಿ, ಕೃಷಿ ಮತ್ತು ಅಭಿವೃದ್ಧಿ ಅನುದಾನದಕಾಮಗಾರಿಗಳಲ್ಲಿ ಸದಸ್ಯರ ಮತ್ತು ಅಧ್ಯಕ್ಷರ ಮರ್ಜಿಗೆ ಇರುವ ಬೆಲೆ ಮತ್ತು ಪಡೆಯುವಕಮಿಷನ್ ಸಹ ಚುನಾವಣೆ ಕಾವು ಏರಿಕೆಗೆ ಕಾರಣ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ನಡೆಯುವ ಕೊಟ್ಯಂತರ ರೂಪಾಯಿ ವ್ಯವಹಾರವು ಗ್ರಾಮ ಪಂಚಾಯಿತಿ ಸ್ಪರ್ಧೆಗೆ ಹೆಚ್ಚಿನ ಜನರು ಒಲವು ತೋರುವಂತೆ ಮಾಡಿದೆ ಎಂದು ಹೇಳುತ್ತಾರೆ ತಾಲ್ಲೂಕಿನ ಮತದಾರರು.

‘ರಾತ್ರಿ ಆಗುತ್ತಲೇ ಕೆಲ ಗ್ರಾಮಗಳಲ್ಲಿ ರಾಜಿ ಪಂಚಾಯಿತಿ ನಡೆಯುತ್ತದೆ. ಹಣವಂತರನ್ನುಸೆಳೆದು ಊರಿಗಾಗಿ ಇಂತಿಷ್ಟು ಹಣ ಕೊಡುವಂತೆ ಯಜಮಾನರು ಆಗ್ರಹಿಸುವುದೂ ಇದೆ. ₹1 ಲಕ್ಷದಿಂದ ಕೆಲವು ಲಕ್ಷಗಳವರೆಗೆ ಕೊಡು-ಕೊಳ್ಳುವ ವ್ಯವಹಾರ ನಡೆದ ನಂತರ ಅಂತಿಮವಾಗಿಸದಸ್ಯರ ಆಯ್ಕೆಗೆ ಹಸಿರು ನಿಶಾನೆ ತೋರಿಸುತ್ತಾರೆ. ಇಂತಹ ಅನಧಿಕೃತ ಒಪ್ಪಂದಕ್ಕೆಹಿಂದೇಟು ಹಾಕಿದರೆ, ಪ್ರತಿಸ್ಪರ್ಧೆಗೆ ಮತ್ತೊಬ್ಬ ಆರ್ಥಿಕವಾಗಿ ಸಬಲರಾಗಿರುವವರನ್ನುನಿಲ್ಲಿಸುವತ್ತಲೂ ಚಿಂತನೆ ನಡೆಸುವ ತಂತ್ರಗಾರಿಕೆಯನ್ನು ಯಜಮಾನರು ತೋರುತ್ತಾರೆ’ ಎಂದು ಹೇಳುತ್ತಾರೆ ಹಳ್ಳಿ ರಾಜಕಾರಣದ ಆಂತರ್ಯ ಬಲ್ಲವರು.

‘ಚುನಾವಣೆ ನಡೆದರೆ ಹಣ ಖರ್ಚು ಮಾಡಬೇಕು. ಮತದಾರರ ಮನೆಗೆ ಅಲೆಯಬೇಕು. ದಿನಪೂರ್ತಿಮದ್ಯದ ಸಮಾರಾಧನೆ ಮಾಡಬೇಕು. ಇಷ್ಟೆಲ್ಲ ಖರ್ಚು ಮಾಡುವ ಬದಲು ಕುಲಕ್ಕೆ ಇಂತಿಷ್ಟು ಎಂದು ಹಣ ನೀಡಿದರೆ ಸುಲಭವಾಗಿ ಆಯ್ಕೆ ಆಗುತ್ತದೆ. ಗ್ರಾಮದ ದೇವಾಲಯ ಇಲ್ಲವೇ ಸಮುದಾಯ ಭವನ ನಿರ್ಮಾಣಕ್ಕೂ ಹಣಕಾಸು ನೆರವು ಕಲ್ಪಿಸಿದಂತೆ ಆಗುತ್ತದೆ’ ಎನ್ನುತ್ತಾರೆ ಹೆಸರು ಹೇಳದ ಗ್ರಾಮ ಪ‍ಂಚಾಯಿತಿ ಸ್ಥಾನದ ಆಕಾಂಕ್ಷಿಗಳು.

‘ನಾವು ಈಗಾಗಲೇ ಹಲವು ಬಾರಿ ಸ್ಪರ್ಧಿಸಿ ಸೋತಿದ್ದೇವೆ. ನಮ್ಮವರ ಮತ ಸಿಕ್ಕರೂ ನಮ್ಮ ಆಯ್ಕೆ ಆಗುವುದಿಲ್ಲ. ಹಾಗಾಗಿ, ಈ ಬಾರಿ ನಾಮಪತ್ರ ಪಡೆಯುವ ಗೋಜಿಗೆ ಹೋಗಿಲ್ಲ’ ಎಂಬ ಮಾತುಗಳು ಕೆಲ ಹಾಡಿಗಳಲ್ಲಿ ಕೇಳಿಬರುತ್ತಿದೆ.

‘ಗ್ರಾಮ ಪಂಚಾಯಿತಿ ಚುನಾವಣೆ ಮೊದಲಿನಂತಿಲ್ಲ. ಪಟ್ಟಣ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸ್ಪರ್ಧೆಯನ್ನುಮೀರಿಸುವಂತೆ ಸಭೆ, ಊಟೋಪಚಾರಗಳು ನಡೆಯುತ್ತಿವೆ. ಆಯ್ಕೆಗೆ ಗ್ರಾಮದ ಸರ್ವ ಸದಸ್ಯರ ಸಹಭಾಗಿತ್ವವೂ ಬೇಕಿದೆ’ ಎಂದು ಇರಸವಾಡಿ ಗ್ರಾಮಸ್ಥ ಮಹದೇವ ಅವರು ಹೇಳಿದರು.

ಪಂಚಾಯಿತಿ ವಿಶೇಷ
2ನೇ ಹಂತದಲ್ಲಿ ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ 189 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ ಅತಿ ಕಡಿಮೆ 7 ಸ್ಥಾನಗಳನ್ನು ಬಿಳಿಗಿರಿರಂಗನಬೆಟ್ಟ ಪಂಚಾಯಿತಿಹೊಂದಿದ್ದು ಸ್ಪರ್ಧೆಗೆ ತರಾತುರಿ ಕಂಡುಬಂದಿಲ್ಲ. ಕೆಸ್ತೂರು ಮತ್ತುಗುಂಬಳ್ಳಿ ತಲಾ 20 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಹೆಚ್ಚಿನ ಪೈಪೋಟಿ ಕಂಡುಬಂದಿದೆ.

ಯರಿಯೂರು-19, ಮಾಂಬಳ್ಳಿ ಹಾಗೂ ದುಗ್ಗಹಟ್ಟಿ ತಲಾ 15 ಸ್ಥಾನಗಳ ಉಮೇದುವಾರಿಕೆಗೆಯುವಜನರ ಚಿತ್ತ ಹರಿದಿದೆ. ಯರಗಂಬಳ್ಳಿ-14, ಅಂಬಳೆ-16, ಹೊನ್ನೂರು-16 ಮತ್ತು ಅಗರ-12ಸದಸ್ಯ ಸ್ಥಾನಗಳಲ್ಲಿ ಹೆಚ್ಚಿನ ಮಹಿಳೆಯರು ಆಯ್ಕೆ ಬಯಸಿ ಪೈಪೋಟಿಗೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT