ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಮೇಲುಕಾಮನಹಳ್ಳಿ ಗ್ರಾಮದ ಹೆದ್ದಾರಿ ಬದಿ ಹೊರ ರಾಜ್ಯದ ಉದ್ಯಮಿಯೊಬ್ಬರು ನಿಯಮ ಉಲ್ಲಂಘಿಸಿ ಅಕ್ರಮ ಕಟ್ಟಡವನ್ನು ನವೀಕರಣ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಆರೇಳು ವರ್ಷದ ಹಿಂದೆ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಜನರ ವಿರೋಧದ ನಡುವೆ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ನವೀಕರಣ ಮಾಡಿ, ದೊಡ್ಡ ಮಾಂಸಹಾರಿ ಹೋಟೆಲ್ ಮಾಡಲು ತಯಾರಿ ಮಾಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಯ ಗಮನಕ್ಕಿದ್ದರು ಇದನ್ನು ಪರಿಶೀಲನೆ ಮಾಡಲು ಹಾಜರಾಗಿಲ್ಲ. ಗ್ರಾಮದ ಜನರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಅಂಗಡಿ ಇಟ್ಟು ಜೀವನ ಮಾಡುತ್ತಿದ್ದಾರೆ. ದೊಡ್ಡ ಹೋಟೆಲ್ ಗಲಕು ತೆರೆದರೆ ಇಲ್ಲಿನ ಜನರ ಜೀವನೋಪಾಯ ಹದಗೇಡುವ ಜೊತೆಗೆ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತದೆ. ತ್ಯಾಜ್ಯ ಹಾಗೂ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಕಾಡು ಪ್ರಾಣಿಗಳಾದ ಹಂದಿ, ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಟ್ಟಡದ ಜೊತೆಗೆ ಹಿಂಬದಿಯಲ್ಲಿ ಎರಡು ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಕಟ್ಟಡವನ್ನು ನಿರ್ಮಾಣ ಮಾಡಬಾರದು ಮತ್ತು ನವೀಕರಣ ಮಾಡಬಾರದು ಎಂಬ ಅರಣ್ಯ ಇಲಾಖೆಯ ಆದೇಶವಿದ್ದರು ಸಹ ಕ್ಯಾರೆ ಎನ್ನದೆ ನವೀಕರಣಕ್ಕೆ ಮುಂದಾಗಿದ್ದಾರೆ.

ಗುರುವಾರ ಬೆಳಿಗ್ಗೆ ಸ್ಥಳಪರಿಶೀಲನೆ ಮಾಡಿ ಕೆಲಸ ನಿಲ್ಲಿಸಲು ಸೂಚಿಸುತ್ತೇನೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಾಂತಮಲ್ಲಪ್ಪ ತಿಳಿಸಿದರು.

ಅಕ್ರಮ ಕಟ್ಟಡ ಇರುವುದು ಕಂಡು ಬಂದರೆ ಮುಚ್ವಿಸಲಾಗುತ್ತದೆ. ನಿಯಮಾನುಸಾರ ಅನುಮತಿ ಪಡೆಯಲಿ ಎಂದು ವಲಯಾಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.