ಗುಂಡ್ಲುಪೇಟೆ: ಮನುಷ್ಯನಿಗೆ ಹುಟ್ಟಿನಿಂದ ಸಾಯುವವರೆಗೂ ಮಾನವ ಹಕ್ಕುಗಳು ಇರುತ್ತದೆ ಎಂದು ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ಆರ್.ಬಿ.ಗಿರೀಶ್ ಹೇಳಿದರು.

ಪಟ್ಟಣದ ಜೆ.ಎಸ್.ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಜೆ.ಎಸ್.ಎಸ್ ಕಾಲೇಜು ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹುಟ್ಟಿನಿಂದಲೇ ಆರೋಗ್ಯ ಮತ್ತು ಶಿಕ್ಷಣ ಮುಂತಾದಹಲವಾರು ಹಕ್ಕುಗಳು ಇರುತ್ತವೆ. ಹಾಗೆಯೇ ಮರಣಾನಂತರ ಗೌರವಯುತ ಶವಸಂಸ್ಕಾರವೂ ಮಾನವ ಹಕ್ಕುಗಳ ವ್ಯಾಪ್ತಿಗೆ ಬರುತ್ತದೆ. ಹಕ್ಕುಗಳ ಉಲ್ಲಂಘನೆ ಯಾಗದಂತೆ ಆಯೋಗ ಕಾರ್ಯನಿರ್ವಹಿಸುತ್ತದೆ ಎಂದರು.

‘ಹಿಂದೆಲ್ಲ ದೂರಿನಲ್ಲಿ ಪೊಲೀಸರು ಆರೋಪಿತನನ್ನು ಬಂಧಿಸುತ್ತಿದ್ದರು. ಆದರೆ ಈಗ ಆತನಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿ ತನಿಖೆಗೆ ಸಹಕರಿಸದೆ ಇದ್ದರೆ ಬಂಧಿಸಬಹುದು. ಹಕ್ಕುಗಳ ಉಲ್ಲಂಘನೆಯಾದರೆ ಆಯೋಗ ರಕ್ಷಣೆ ನೀಡುತ್ತದೆ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ರೇವಣ್ಣ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಜವರಾಜು, ವಕೀಲ ಅರವಿಂದ್ ಕುಮಾರ್, ಪ್ರಾಂಶುಪಾಲೆ ಮಹದೇವಮ್ಮ, ಪ್ರಾಂಶುಪಾಲ ಮಲ್ಲಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.