ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಮತ್ತು ಮಾಧ್ಯಮ ಪ್ರಕೋಷ್ಠ ವತಿಯಿಂದ ಭಾನುವಾರ ನಗರದಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಸೇವಾ ಭಾರತಿ ಆಂಗ್ಲಮಾಧ್ಯಮ ನರ್ಸರಿ ಶಾಲೆಯಲ್ಲಿ ನಡೆದ ಶಿಬಿರವನ್ನು
ಸೇವಾ ಪಾಕ್ಷಿಕ ಜಿಲ್ಲಾ ಸಂಚಾಲಕ ಎಂ.ರಾಮಚಂದ್ರ ಹಾಗೂ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಆಡಳಿತ ಮಂಡಳಿಯ ನಾಮನಿರ್ದೇಶಿತ ಸದಸ್ಯ ಡಾ.ಎ.ಆರ್. ಬಾಬು ಉದ್ಘಾಟಿಸಿದರು.

ಎಂ.ರಾಮಚಂದ್ರ ಮಾತನಾಡಿ, ಮೋದಿ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡಿ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆಯಲ್ಲದೇ, ವಿಶ್ವ ನಾಯಕರಾಗಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ಸೆ.17 ಅ.2ರವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ಡಾ.ಎ.ಆರ್.ಬಾಬು ಮಾತನಾಡಿ, ‘ಮೋದಿಯವರು ದೇಶದ ವೈದ್ಯಕೀಯ ಸಮೂಹಕ್ಕೆ ಅನೇಕ ಯೋಜನೆಗಳನ್ನುನೀಡಿದ್ದಾರೆ. ಆಯುಷ್ಮಾನ್ ಭಾರತ್, ದೇಶದಲ್ಲಿ 8,600 ಜನೌಷಧ ಕೇಂದ್ರಗಳು, ರಾಜ್ಯದಲ್ಲಿ 288 ಜನೌಷಧ ಕೇಂದ್ರಗಳನ್ನು ತೆರೆದು ಕಡುಬಡವರಿಗೆ ರಿಯಾಯಿತಿ ದರದಲ್ಲಿ ಔಷಧಿಗಳ ವಿತರಿಸಲಾಗುತ್ತಿದೆ. ಬಿಪಿಎಲ್ ಕುಟುಂಬದವರಿಗೆ ಉಚಿತ ಆರೋಗ್ಯ ವಿಮೆ ನೀಡಿದ್ದಾರೆ’ ಎಂದರು.

ಪಾರ್ವತಿ ಬಾಲ ಆಶ್ರಮದ ಮಕ್ಕಳು, ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕಿವಿ, ಮೂಗು ಗಂಟಲು ತಪಾಸಣೆ, ದಂತ ತಪಾಸಣೆ, ಕಣ್ಣಿನ ತಪಾಸಣೆ, ರಕ್ತ ದೊತ್ತಡ, ಮಧುಮೇಹ, ಸೇರಿದಂತೆ ಇನ್ನಿತರ ಸಮಸ್ಯೆ ತಪಾಸಣೆ ನಡೆಯಿತು. ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್,ಸೇವಾ ಪಾಕ್ಷಿಕ ಸಹ ಸಂಚಾಲಕರಾದ ಅಯ್ಯನಪುರ ಶಿವಕುಮಾರ್, ಕಿಲಗೆರೆ ಬಸವರಾಜು,ಜಿಲ್ಲಾ ಮಾಧ್ಯಮ ಪ್ರಮುಖ್ ಎನ್.ಮಂಜುನಾಥ್, ಸಹ ಸಂಚಾಲಕ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಪಿ. ವೃಷಬೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ನಾಗಶ್ರೀ ಪ್ರತಾಪ್, ಮಂಗಲ ಶಿವಕುಮಾರ್,ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಪದ್ಮ, ಸರಸ್ವತಿ ಇತರರು ಇದ್ದರು.

ರಕ್ತದಾನ ಶಿಬಿರ: ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿ ಜಿಲ್ಲಾ ಯುವಮೋರ್ಚಾ ವತಿಯಿಂದ ಶನಿವಾರ ರಕ್ತದಾನ ಶಿಬಿರ ನಡೆಯಿತು. 32 ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾಗಶ್ರೀಪ್ರತಾಪ್, ಸೇವಾ ಪಾಕ್ಷಿಕ ಸಂಚಾಲಕರಾದ ಎಸ್.ರಾಮಚಂದ್ರ, ಅಯ್ಯನಪುರ ಶಿವಕುಮಾರ್,ನಗರ ಮಂಡಲದ ಯುವ ಮೋಚಾ ಅಧ್ಯಕ್ಷ ಅನಂಧ್ ಭಗೀರಥ,ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಕಾಡಾ ಅಧ್ಯಕ್ಷ ನಿಜಗುಣರಾಜು, ಡಾ. ಎ.ಆರ್. ಬಾಬು, ನಗರಸಭಾ ಅಧ್ಯಕ್ಷೆ ಆಶಾನಟರಾಜು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.