ಸೋಮವಾರ, ಜೂನ್ 21, 2021
29 °C

ಚಾಮರಾಜನಗರ: ಒಂದೇ ರಾತ್ರಿಯಲ್ಲಿ 14 ಕೋವಿಡ್‌ ಸೋಂಕಿತರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಶನಿವಾರ ಸಂಜೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 9 ಗಂಟೆಯವರೆಗೆ ಇಲ್ಲಿನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 4,186 ಮಂದಿ ಕೊರೊನಾ ಸೋಂಕಿತರು ಇದ್ದಾರೆ. ಇವರಲ್ಲಿ 50 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ.

ಮೃತಪಟ್ಟವರ ವಿವರ:

ಕೊಳ್ಳೇಗಾಲ ಪಟ್ಟಣದ 45 ವರ್ಷದ ಮಹಿಳೆ, 64 ವರ್ಷದ ಮಹಿಳೆ, 64 ವರ್ಷದ ಪುರುಷ,  58 ವರ್ಷದ ಮಹಿಳೆ, ಹನೂರು ತಾಲ್ಲೂಕಿನ ಬಂಡಳ್ಳಿಯ 90 ವರ್ಷದ ಪುರುಷ, 50 ವರ್ಷದ ಪುರುಷ,  ಚಾಮರಾಜನಗರ ತಾಲ್ಲೂಕಿನ ಕೆ.ಕೆ.ಹುಂಡಿ ಗ್ರಾಮದ 52 ವರ್ಷದ ಪುರುಷ, ಬಸ್ತಿಪುರದ 70 ವರ್ಷದ ಮಹಿಳೆ, ಅಮಚವಾಡಿಯ 39 ವರ್ಷದ ಪುರುಷ, ಮಂಗಲ ಗ್ರಾಮದ 65 ವರ್ಷದ ಮಹಿಳೆ, ಹರದನಹಳ್ಳಿಯ 40 ವರ್ಷದ ಮಹಿಳೆ, ಕೋಳಿಪಾಳ್ಯ ಗ್ರಾಮದ 45 ವರ್ಷದ ಪುರುಷ, ಚಾಮರಾಜನಗರ ಪಟ್ಟಣದ 42 ವರ್ಷದ ಪುರುಷ, 59 ವರ್ಷದ ಪುರುಷ ಮೃತಪಟ್ಟಿದ್ದಾರೆ.

ಶನಿವಾರದ ಸೋಂಕಿತರ ಪೈಕಿ 91 ಮಂದಿ ಮಾತ್ರವೇ ಪಟ್ಟಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ 576 ಮಂದಿ ವಿವಿಧ ಹಳ್ಳಿಗಳಿಗೆ ಸೇರಿದವರೇ ಆಗಿದ್ದಾರೆ. ಇವರಲ್ಲಿ 41 ಮಂದಿ ಮಕ್ಕಳೂ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು